ADVERTISEMENT

ಯಾರನ್ನೂ ದೂರಬೇಡಿ..ತಪ್ಪೆಲ್ಲವೂ ನನ್ನದೇ: ಹಮೀದ್ ನಿಹಾಲ್ ಅನ್ಸಾರಿ

ಗೂಢಾಚಾರಿಕೆ ಆರೋಪದ ಮೇಲೆ ಪಾಕ್‌ನಲ್ಲಿ ಸೆರೆವಾಸ

ಏಜೆನ್ಸೀಸ್
Published 20 ಡಿಸೆಂಬರ್ 2018, 12:39 IST
Last Updated 20 ಡಿಸೆಂಬರ್ 2018, 12:39 IST
   

ನವದೆಹಲಿ: ನಾನು ಸೆರೆವಾಸ ಅನುಭವಿಸಿದ ಬಂದ ವಿಚಾರದಲ್ಲಿ ಯಾರನ್ನೂ ದೂರಬೇಡಿ..ತಪ್ಪೆಲ್ಲವೂ ನನ್ನದೇ..ನಾ ಮಾಡಿದ ಅಪರಾಧಕ್ಕೆ ಬೆಲೆ ಕಟ್ಟಿದ್ದೇನೆ...

ಹೀಗೆ ಹೇಳಿದವರು ಗೂಢಾಚಾರಿಕೆಆರೋಪದ ಮೇಲೆ ಪಾಕಿಸ್ತಾನದಲ್ಲಿ ಆರು ವರ್ಷ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ಮರಳಿದ ಮುಂಬೈ ಎಂಜಿನಿಯರ್ ಹಮೀದ್ ನಿಹಾಲ್ ಅನ್ಸಾರಿ.

ನಾನೀಗ ನನ್ನ ಮನೆಯಲ್ಲಿ, ನಮ್ಮವರ ಜೊತೆಯಲ್ಲಿ, ನನ್ನ ರಾಷ್ಟ್ರದಲ್ಲಿದ್ದೇನೆ. ನನ್ನ ದೇಶಕ್ಕೆ ಮರಳುತ್ತಿದ್ದಂತೆ ಇಷ್ಟೊಂದು ಅಗಾಧಪ್ರೀತಿ ದೊರೆಯುತ್ತದೆಂದು ನಾನು ಭಾವಿಸಿರಲಿಲ್ಲ. ನಾನು ನನ್ನ ರಾಷ್ಟ್ರ ತಲುಪಲು ಸಹಕರಿಸಿದ ಎರಡು ರಾಷ್ಟ್ರದ ಮಂದಿಗೆ ಅನಂತಾನಂತ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅನ್ಸಾರಿ ಭಾವುಕ ಮಾತನಾಡಿದ್ದಾರೆ.

ADVERTISEMENT

ಇದೆಲ್ಲವೂ ನನ್ನದೇ ತಪ್ಪು. ನನ್ನ ಆಲೋಚನೆ ಉತ್ತಮವಾಗಿತ್ತು. ಆದರೆ ಇಟ್ಟ ಹೆಜ್ಜೆ ಸಮಂಜಸವಾಗಿರಲಿಲ್ಲ. ಅದಕ್ಕೆ ನಾನೇ ಬೆಲೆ ತೆತ್ತಿದ್ದೇನೆಎಂದೂ ಹೇಳಿದರು.

ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ್ದ ಅನ್ಸಾರಿ, ಆಕೆಗೆ ಒತ್ತಾಯ ಪೂರ್ವಕವಾಗಿ ನಡೆಸಲಾಗುತ್ತಿದ್ದ ಮದುವೆಯಿಂದ ರಕ್ಷಿಸಲು ಕೋಹಟ್‌ಗೆ ತೆರಳಿದ್ದರು. 2012ರ ನವೆಂಬರ್‌ 12ರಂದು ಜಲಾಲಾಬಾದ್‌ನಲ್ಲಿ ಅಫ್ಘನಿಸ್ತಾನದ ಗಡಿ ದಾಟಿ ಪಾಕಿಸ್ತಾನದ ಪೇಶಾವರ ಪ್ರವೇಶಿಸುತ್ತಿದ್ದಂತೆ ಅಲ್ಲಿನ ಗುಪ್ತಚರ ಅಧಿಕಾರಿಗಳಿಂದ ಅನ್ಸಾರಿ ಬಂಧನವಾಗಿತ್ತು. ಕಳೆದ ಮಂಗಳವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಸಹಕಾರದಿಂದ ಭಾರತಕ್ಕೆ ತಲುಪಿದ್ದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.