ಶ್ರೀನಗರ: ಪಾಕಿಸ್ತಾನದ ಶೆಲ್ ದಾಳಿ ಭೀತಿಯಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದ ಗಡಿ ಪ್ರದೇಶಗಳ ಜನರು, ಸಂಘರ್ಷಕ್ಕೆ ವಿರಾಮ ಘೋಷಣೆಯಾಗಿದೆ ಎಂದು ಕೂಡಲೇ ತಮ್ಮ ಮನೆಗೆ ಹಿಂದಿರುಗದಿರಿ ಎಂದು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ಭಾನುವಾರ ಸೂಚನೆ ನೀಡಿದ್ದಾರೆ.
ಪ್ರದೇಶದಲ್ಲಿ ಶೆಲ್‌ಗಳು ಸ್ಫೋಟಗೊಳ್ಳದೇ ಬಿದ್ದಿರುವ ಸಾಧ್ಯತೆ ಇದೆ. ಬಾಂಬ್ ನಿಷ್ಕ್ರಿಯ ದಳ ಪರಿಶೀಲಿಸಿ ನಿಷ್ಕ್ರಿಯ ಮಾಡುವವರೆಗೆ ಮನೆಗಳಿಗೆ ಹಿಂದಿರುಗಬೇಡಿ ಎಂದು ಪೊಲೀಸರು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.
2023ರಲ್ಲಿ ತಡವಾಗಿ ಸ್ಫೋಟಗೊಂಡ ಶೆಲ್ ದಾಳಿಯಿಂದಾಗಿ 41 ಮಂದಿ ಮೃತಪಟ್ಟಿದ್ದರು ಎಂದು ಹೇಳಿದ್ದಾರೆ.
ಪಾಕಿಸ್ತಾನದ ದಾಳಿ ಕಾರಣದಿಂದ ನೈಜ ನಿಯಂತ್ರಣ ರೇಖೆಗೆ ಸಮೀಪದ ಬಾರಾಮುಲ್ಲಾ, ಬಂಡಿಪೋರ, ಕುಪ್ವಾರಾ ಜಿಲ್ಲೆಗಳ 1.25 ಲಕ್ಷಕ್ಕೂ ಅಧಿಕ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.