ADVERTISEMENT

ಟ್ರಂಪ್‌ ಕಾರ್ಯಸೂಚಿಗೆ ಬಲಿಯಾಗಬೇಡಿ: ಸಿಪಿಎಂ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 20:20 IST
Last Updated 24 ಫೆಬ್ರುವರಿ 2020, 20:20 IST

ನವದೆಹಲಿ: ಬಂಡವಾಳಶಾಹಿಗಳ ಹಿತಾಸಕ್ತಿ ಕಾಯಲು ಮತ್ತು ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಟ್ರಂಪ್‌ ಅವರ ಏಕಪಕ್ಷೀಯ ಕಾರ್ಯಚೂಚಿಗೆ ನರೇಂದ್ರ ಮೋದಿ ಸರ್ಕಾರ ಬಲಿಯಾಗಬಾರದು ಎಂದು ಸಿಪಿಎಂ ಎಚ್ಚರಿಸಿದೆ.

ಕೇಂದ್ರ ಸರ್ಕಾರವು ಜನರ ಧ್ವನಿಯನ್ನು ಅಡಗಿಸುತ್ತಿದೆ ಮತ್ತು ಅಮೆರಿಕದ ಒತ್ತಡಕ್ಕೆ ಮಣಿಯುತ್ತಿದೆ. ಟ್ರಂಪ್‌ ಅವರು ಭಾರತದ ಕೃಷಿ, ಆರೋಗ್ಯ ಮತ್ತು ಇತರ ಕ್ಷೇತ್ರಗಳನ್ನು ಗುರಿಯಾಗಿಸಿ ಒಪ್ಪಂದಗಳನ್ನು ಮಾಡಿಕೊಳ್ಳಲು ಭಾರತಕ್ಕೆ ಬಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದೆ.

ರಕ್ಷಣಾ ಒಪ್ಪಂದಗಳು ಅಮೆರಿಕ ಪರವಾಗಿರಲಿದ್ದು, ಭಾರತಕ್ಕೆ ದುಬಾರಿಯಾಗಲಿವೆ. ಯಾವುದೇ ಒತ್ತಡಗಳಿಗೆ ಬಲಿಯಾಗಬಾರದು, ದೇಶ ಮತ್ತು ಜನರ ಹಿತ ಕಾಯಲು ಬಿಜೆಪಿ ಸರ್ಕಾರ ಮುಂದಾಗಬೇಕು ಎಂದೂ ಸಲಹೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.