ADVERTISEMENT

3ನೇ ಹಂತದ ಕ್ಲಿನಿಕಲ್ ಟ್ರಯಲ್‌ಗೆ ಅನುಮತಿ ಕೇಳಿದ ರೆಡ್ಡೀಸ್ ಲ್ಯಾಬ್‌

ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ವಿ ಲಸಿಕೆ ಪ್ರಯೋಗ

ಪಿಟಿಐ
Published 3 ಅಕ್ಟೋಬರ್ 2020, 6:05 IST
Last Updated 3 ಅಕ್ಟೋಬರ್ 2020, 6:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕಾಗಿ ರಷ್ಯಾ ಅಭಿವೃದ್ಧಿಪಡಿಸಿರುವ ‘ಸ್ಪುಟ್ನಿಕ್ ವಿ’ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ ಅನ್ನು ಭಾರತದಲ್ಲಿ ನಡೆಸಲು ಹೈದರಾಬಾದ್‌ ಮೂಲದ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್‌ನವರು ಭಾರತೀಯ ಪ್ರಧಾನ ಔಷಧ ನಿಯತ್ರಣ ಸಂಸ್ಥೆಯ(ಡಿಸಿಜಿಐ) ಅನುಮತಿ ಕೇಳಿದ್ದಾರೆ.

ಇಲ್ಲಿವರೆಗೂ ರೆಡ್ಡೀಸ್ ಲ್ಯಾಬೊರೇಟರಿ ಮತ್ತು ರಷ್ಯಾ ಡೈರೆಕ್ಟ್‌ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್‌) ಜಂಟಿಯಾಗಿ ಎರಡು ಹಂತಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿವೆ.

ಭಾರತದಲ್ಲಿ ಕ್ಲಿನಿಕಲ್‌ ಟ್ರಯಲ್‌ಗೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದರೆ, 10 ಕೋಟಿ ಡೋಸೇಜ್‌ಗಳಷ್ಟು ಲಸಿಕೆಯನ್ನು ರೆಡ್ಡಿ ಲ್ಯಾಬೊರೇಟರಿಗೆ ಪೂರೈಸುವುದಾಗಿ ಆರ್‌ಡಿಎಫ್‌ಐ ಕಳೆದ ತಿಂಗಳು ತಿಳಿಸಿತ್ತು.

ADVERTISEMENT

‘ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ಗಾಗಿ ರೆಡ್ಡೀಸ್ ಲ್ಯಾಬೊರೇಟರೀಸ್‌ನವರು ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಲಿನಿಕಲ್‌ ಟ್ರಯಲ್‌ಗೆ ಡಿಸಿಜಿಐ ಸಂಸ್ಥೆ ಅನುಮೋದನೆ ನೀಡುವ ಮೊದಲು, ಅರ್ಜಿಯಲ್ಲಿರುವ ತಾಂತ್ರಿಕ ಅಂಶಗಳನ್ನು ಮೌಲ್ಯಮಾಪನ ನಡೆಸಲಿದೆ‘ ಎಂದು ಮೂಲಗಳು ತಿಳಿಸಿವೆ.

ರಷ್ಯಾದಲ್ಲಿ ಸೆಪ್ಟೆಂಬರ್ 1ರಿಂದ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ. 40 ಸಾವಿರ ಸ್ವಯಂ ಸೇವಕರು ಈ ಪ್ರಯೋಗಕ್ಕೆ ಒಳಪಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.