ADVERTISEMENT

ಶಿವರಾಮ ಕಾರಂತ ಬಡಾವಣೆ: 870 ಕಟ್ಟಡಗಳ ಸಕ್ರಮಕ್ಕೆ ಸುಪ್ರೀಂ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 17:22 IST
Last Updated 21 ಏಪ್ರಿಲ್ 2022, 17:22 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ನ್ಯಾ. ಎ.ವಿ. ಚಂದ್ರಶೇಖರ್ ಸಮಿತಿಯ 13ನೇ ವರದಿಯ ಶಿಫಾರಸಿನಂತೆ ಶಿವರಾಮ ಕಾರಂತ ಬಡಾವಣೆಯ 870 ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ(ಬಿಡಿಎ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ಅವರಿದ್ದ ಪೀಠವು, 4 ವಾರಗಳ ಒಳಗಾಗಿ ಸಮಿತಿಯ ಮೇಲ್ವಿಚಾರಣೆಯಡಿ ಪಾರದರ್ಶಕವಾಗಿ ಅರ್ಜಿದಾರರಿಗೆ ಸಕ್ರಮದ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಬಿಡಿಎ ಆಯುಕ್ತರಿಗೆ ಸೂಚಿಸಿದೆ.ಅಲ್ಲದೆ, ಸಮಿತಿಯೊಂದಿಗೆ ಚರ್ಚೆ ನಡೆಸಿದ ಬಳಿಕ ನಿರ್ಮಾಣದ ಸ್ವರೂಪಕ್ಕೆ ಸಂಬಂಧಿಸಿ 2 ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರದ ವಸತಿ ಇಲಾಖೆಗೂ ಸೂಚಿಸಲಾಗಿದೆ.
ಶ್ರೀ ರೇಣುಕಾ ಆದಿಪರಾಶಕ್ತಿ ದೇವಸ್ಥಾನಕ್ಕೆ ಸೇರಿದ ಏಳು ದೇವಾಲಯಗಳು, ಯೋಗ ಶಾಲೆ, ಅಡುಗೆ ಕೋಣೆ, ಭೋಜನಶಾಲೆ ಹಾಗೂ ವಸತಿ ಇತ್ಯಾದಿಗಳ ಕಟ್ಟಡಗಳಿಗೆ ಸಂಬಂಧಿಸಿ ಮಾಡಿದ್ದ ಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.