ADVERTISEMENT

ಎಸ್‌ಎಫ್‌ಡಿಆರ್‌ ತಂತ್ರಜ್ಞಾನದ ಕ್ಷಿಪಣಿಗಳ ಹಾರಾಟ ಯಶಸ್ವಿ

ಪಿಟಿಐ
Published 5 ಮಾರ್ಚ್ 2021, 16:00 IST
Last Updated 5 ಮಾರ್ಚ್ 2021, 16:00 IST
ಎಸ್‌ಎಫ್‌ಡಿಆರ್‌ ತಂತ್ರಜ್ಞಾನದ ಕ್ಷಿಪಣಿಗಳ ಹಾರಾಟ ಶುಕ್ರವಾರ ಯಶಸ್ವಿಯಾಯಿತು
ಎಸ್‌ಎಫ್‌ಡಿಆರ್‌ ತಂತ್ರಜ್ಞಾನದ ಕ್ಷಿಪಣಿಗಳ ಹಾರಾಟ ಶುಕ್ರವಾರ ಯಶಸ್ವಿಯಾಯಿತು   

ಬಾಲಾಸೋರ್‌, ಒಡಿಶಾ: ಎಸ್‌ಎಫ್‌ಡಿಆರ್ (ಸಾಲಿಡ್‌ ಫ್ಯುಯಲ್‌ ಡಕ್ಟೆಡ್ ರಾಮ್‌ಜೆಟ್‌) ತಂತ್ರಜ್ಞಾನ ಆಧರಿತ ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಶುಕ್ರವಾರ ಒಡಿಶಾದಲ್ಲಿ ಯಶಸ್ವಿಯಾಗಿ ನಡೆಸಿತು.

ಚಾಂದಿಪುರ್‌ ಉಡಾವಣಾ ಕೇಂದ್ರದಲ್ಲಿ ಬೆಳಿಗ್ಗೆ 10.30 ಸುಮಾರಿಗೆ ‌ಈ ಪ್ರಯೋಗ ನಡೆಯಿತು. ಈ ಯಶಸ್ಸಿ ಪ್ರಯೋಗದ ಹಿನ್ನೆಲೆಯಲ್ಲಿ ಡಿಆರ್‌ಡಿಒ ಈಗ ದೂರಗಾಮಿ ಗುರಿಯ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದು ಸಾಧ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ವಿಮಾನದ ಹಾರಾಟದ ವೇಳೆ ಗ್ರೌಂಡ್‌ ಬೂಸ್ಟರ್‌ ಮೋಟಾರ್‌ ಒಳಗೊಂಡಂತೆ ಎಲ್ಲ ಯಾಂತ್ರಿಕ ವ್ಯವಸ್ಥೆಯು ನಿರೀಕ್ಷೆಯಂತೆ ಕಾರ್ಯನಿರ್ವಹಿಸಿದವು ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.