ADVERTISEMENT

ಕೋವಿಡ್ ಪ್ರತಿಕಾಯ ಪತ್ತೆ ಕಿಟ್ ರೂಪಿಸಿದ ಡಿಆರ್‌ಡಿಒ

ಪಿಟಿಐ
Published 21 ಮೇ 2021, 15:50 IST
Last Updated 21 ಮೇ 2021, 15:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಕೋವಿಡ್–19 ಪ್ರತಿಕಾಯಗಳನ್ನು (ಆ್ಯಂಟಿಬಾಡಿ) ಪತ್ತೆ ಹಚ್ಚುವ ಕಿಟ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಕಿಟ್ ಕೇವಲ 75 ನಿಮಿಷಗಳಲ್ಲಿ ಫಲಿತಾಂಶ ನೀಡುತ್ತದೆ’ ಎಂದು ಕೇಂದ್ರ ರಕ್ಷಣಾ ಸಚಿವಾಲಯವು ಶುಕ್ರವಾರ ತಿಳಿಸಿದೆ.

‘ಡಿಪ್‌ಕೋವ್ಯಾನ್’ ಹೆಸರಿನಲ್ಲಿ ಕರೆಯಲಾಗುವ ಈ ಕಿಟ್, ಕೇವಲ 75 ನಿಮಿಷಗಳಲ್ಲಿ ಫಲಿತಾಂಶ ತೆಗೆದು ಕೊಳ್ಳುವುದರಿಂದ ಇತರ ರೋಗಗಳೊಂದಿಗೆ ಯಾವುದೇ ಅಡ್ಡ ಪರಿಣಾಮ ಬೀರದು’ ಎಂದು ಸಚಿವಾಲಯವು ವಿಶ್ವಾಸ ವ್ಯಕ್ತಪಡಿಸಿದೆ.

‘ಈ ಕಿಟ್‌ನ ಶೆಲ್ಫ್ ಲೈಫ್ (ನಿಗದಿತ ಅವಧಿ) 18 ತಿಂಗಳುಗಳಾಗಿದ್ದು, ನ್ಯೂಕ್ಲಿಯೊಕ್ಯಾಪ್ಸಿಡ್ (ಎನ್ ಅಂಡ್ ಎನ್), ಸಾರ್ಸ್‌–ಕೋವಿನ್–2 ಪ್ರೊಟೀನ್‌ಗಳನ್ನು ಪತ್ತೆ ಮಾಡುತ್ತದೆ. ನವದೆಹಲಿ ಮೂಲದ ವ್ಯಾನ್‌ಗಾರ್ಡ್ ಡಯಾಗ್ನೋಸ್ಟಿಕ್ಸ್ ಪ್ರೈ ಲಿ. ಜತೆಗೂಡಿ ಈ ಕಿಟ್ ಅನ್ನು ಅಭಿವೃದ್ಧಿ ಪಡಿಸಲಾಗಿದ್ದು, ಜೂನ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದೂ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.