ADVERTISEMENT

ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ‘ಉಗ್ರಂ’ ರೈಫಲ್‌ ಅನಾವರಣ

ಪಿಟಿಐ
Published 9 ಜನವರಿ 2024, 16:27 IST
Last Updated 9 ಜನವರಿ 2024, 16:27 IST
ಡಿಆರ್‌ಡಿಒ
ಡಿಆರ್‌ಡಿಒ   

ಪುಣೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಖಾಸಗಿ ಕಂಪನಿಯ ಜೊತೆ ಸೇರಿ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಅಸಾಲ್ಟ್‌ ರೈಫಲ್‌ ‘ಉಗ್ರಂ’ನ ಅನ್ನು ಸೋಮವಾರ ಅನಾವರಣಗೊಳಿಸಲಾಯಿತು.

ಡಿಆರ್‌ಡಿಒದ ಪುಣೆಯಲ್ಲಿರುವ ಪ್ರಯೋಗಾಲಯದಲ್ಲಿ ಈ ರೈಫಲ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಎ ಆ್ಯಂಡ್‌ ಸಿ ಎಂಜಿನಿಯರಿಂಗ್‌ ಕ್ಲಸ್ಟರ್‌ನ ಮಹಾ ನಿರ್ದೇಶಕ ಡಾ.ಎಸ್‌.ವಿ.ಗಾಡೆ ಅವರು ರೈಫಲ್‌ ಅನಾವರಣಗೊಳಿಸಿದರು.

‘ಅಂತರರಾಷ್ಟ್ರೀಯ ಗುಣಮಟ್ಟ ಮಾನದಂಡಗಳಿಗೆ ಅನುಸಾರವಾಗಿ ಈ ರೈಫಲ್‌ ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ’ ಎಂದು ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ(ಎಆರ್‌ಡಿಇ) ನಿರ್ದೇಶಕ ಎ.ರಾಜು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.