ADVERTISEMENT

ಲೇಸರ್‌ ನಿರ್ದೇಶಿತ ಟ್ಯಾಂಕ್ ನಿರೋಧಕ ಕ್ಷಿಪಣಿ ಪರೀಕ್ಷೆ ಯಶಸ್ವಿ

ಪಿಟಿಐ
Published 23 ಸೆಪ್ಟೆಂಬರ್ 2020, 11:52 IST
Last Updated 23 ಸೆಪ್ಟೆಂಬರ್ 2020, 11:52 IST
ಅಹಮದ್‌ನಗರದ ಶಸ್ತ್ರಾಸ್ತ್ರ ಬಳಕೆ ತರಬೇತಿ ಕೇಂದ್ರಲ್ಲಿ ಬುಧವಾರ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಲೇಸರ್ ಗೈಡೆಡ್‌ ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.
ಅಹಮದ್‌ನಗರದ ಶಸ್ತ್ರಾಸ್ತ್ರ ಬಳಕೆ ತರಬೇತಿ ಕೇಂದ್ರಲ್ಲಿ ಬುಧವಾರ ಡಿಆರ್‌ಡಿಒ ಅಭಿವೃದ್ಧಿಪಡಿಸಿರುವ ಲೇಸರ್ ಗೈಡೆಡ್‌ ಟ್ಯಾಂಕ್ ಗೈಡೆಡ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು.   

ನವದೆಹಲಿ: ರಕ್ಷಣೆ ಮತ್ತು ಸಂಶೋಧನೆ ಅಭಿವೃದ್ಧಿ ಸಂಸ್ಥೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವಲೇಸರ್‌ ನಿರ್ದೇಶಿತ ಟ್ಯಾಂಕ್ ನಿರೋಧಕ ಕ್ಷಿಪಣಿಯನ್ನುಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿರುವ ಶಸ್ತ್ರಾಸ್ತ್ರ ಬಳಕೆ ತರಬೇತಿ ಕೇಂದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

ಶತ್ರುಪಡೆಯ ಟ್ಯಾಂಕ್‌ಗಳನ್ನುನಾಲ್ಕು ಕಿ.ಮೀ. ದೂರದಿಂದಲೇ ಗುರುತಿಸಿ, ಲೇಸರ್‌ ನಿರ್ದೇಶಿತ ಗುರಿ ಹಿಡಿದು, ಈ ಕ್ಷಿಪಣಿಯನ್ನು ಪ್ರಯೋಗಿಸಬಹುದಾಗಿದೆ.ಅಹಮದ್‌ನಗರದ ಆರ್ಮೌರ್ಡ್ ಕಾರ್ಪ್ಸ್‌ ಸೆಂಟರ್ ಅಂಡ್ ಸ್ಕೂಲ್ (ಎಸಿಸಿ ಅಂಡ್‌ ಎಸ್‌)ನ ಕೆ.ಕೆ ರೇಂಜ್‌ನಲ್ಲಿ ಎಂಬಿಟಿ ಅರ್ಜುನ್ ಟ್ಯಾಂಕ್‌ನಿಂದ ಪರೀಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ಷಿಪಣಿಯು ಪಾಕಿಸ್ತಾನ ಮತ್ತು ಚೀನಾದ ಗಡಿಯಲ್ಲಿನ ಭಾರತೀಯ ಸೇನೆಯ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಕ್ಷಿಪಣಿ ನಿಗದಿಪಡಿಸಿದ ಗುರಿಯನ್ನು ನಿಖರವಾಗಿ ತಲುಪುವಂತಹ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕ್ಷಿಪಣಿಯ ಪರೀಕ್ಷೆ ಯಶಸ್ವಿಗೊಳಿಸಿದ ಡಿಆರ್‌ಡಿಒ ತಂಡವನ್ನುಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.