ADVERTISEMENT

ಕೋವಿಡ್ ಆಸ್ಪತ್ರೆ; ಸ್ಥಳ ಪರಿಶೀಲಿಸಿದ ಡಿಆರ್‌ಡಿಒ ತಂಡ

ಪಿಟಿಐ
Published 27 ಜುಲೈ 2020, 10:37 IST
Last Updated 27 ಜುಲೈ 2020, 10:37 IST
ಕೋವಿಡ್‌ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಪ್ರಕ್ರಿಯೆ (ಪ್ರಾತಿನಿಧಿಕ ಚಿತ್ರ)
ಕೋವಿಡ್‌ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಪ್ರಕ್ರಿಯೆ (ಪ್ರಾತಿನಿಧಿಕ ಚಿತ್ರ)   

ಪಟ್ನಾ: ನವದೆಹಲಿಯಲ್ಲಿರುವಂತೆ ಪಟ್ನಾ ಮತ್ತು ಅಕ್ಕಪಕ್ಕದ ಜಿಲ್ಲೆಗಳಲ್ಲೂ ಕೋವಿಡ್‌ 19 ರೋಗಿಗಳ ಚಿಕಿತ್ಸೆಗಾಗಿ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣಕ್ಕೆ ದೇಶದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಂದಾಗಿದೆ.

ತಾತ್ಕಾಲಿಕ ಆಸ್ಪತ್ರೆ ನಿರ್ಮಾಣದ ಸಂಬಂಧ ಸ್ಥಳ ಪರಿಶೀಲನೆಗಾಗಿ ಸೋಮವಾರ ಡಿಆರ್‌ಡಿಒ ಅಧಿಕಾರಿಗಳ ತಂಡ ಪಟ್ನಾಕ್ಕೆ ಭೇಟಿ ನೀಡಿತ್ತು. ಇಲ್ಲಿ 500 ಹಾಸಿಗೆಗಳ ಸಾಮರ್ಥ್ಯದ ತಾತ್ಕಾಲಿಕ ‘ಕೋವಿಡ್‌ 19‘ ಆಸ್ಪತ್ರೆ ನಿರ್ಮಿಸಲು ಡಿಆರ್‌ಡಿಒ ತೀರ್ಮಾನಿಸಿದೆ.

ಡಿಆರ್‌ಡಿಒ ಅಧಿಕಾರಿಗಳು ಪಟ್ನಾ ಜಿಲ್ಲೆಯ ಜಿಲ್ಲಾಧಿಕಾರಿ ಅವರ ಜತೆ, ನಗರದಲ್ಲಿರುವ ಪಶುವೈದ್ಯಕೀಯ ಕಾಲೇಜು ಮತ್ತು ನಗರದಿಂದ 35 ಕಿ.ಮೀ ದೂರದಲ್ಲಿರುವ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.