ADVERTISEMENT

ವಿಜಯವಾಡ: ಕನಕ ದುರ್ಗಾ ದೇಗುಲದಲ್ಲಿ ಸಾಂಪ್ರದಾಯಿಕ ಉಡುಗೆಯವರಿಗೆ ಮಾತ್ರ ಪ್ರವೇಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 12:08 IST
Last Updated 31 ಡಿಸೆಂಬರ್ 2018, 12:08 IST
ಕನಕ ದುರ್ಗಾ ದೇಗುಲ (ಕೃಪೆ: ವಿಕಿಪೀಡಿಯಾ)
ಕನಕ ದುರ್ಗಾ ದೇಗುಲ (ಕೃಪೆ: ವಿಕಿಪೀಡಿಯಾ)   

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಪ್ರಸಿದ್ಧ ಕನಕ ದುರ್ಗಾದೇಗುಲದಲ್ಲಿ ಜನವರಿ 1ರಿಂದ ವಸ್ತ್ರ ಸಂಹಿತೆ ಜಾರಿಯಾಗಲಿದೆ.
ಆ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಜತೆ ಮಾತನಾಡಿದ ದೇವಾಲಯದ ಕಾರ್ಯಕಾರಿ ಅಧಿಕಾರಿ ಕೋಟೇಶ್ವರಮ್ಮ, ದೇವಾಲಯಕ್ಕೆ ಭೇಟಿ ನೀಡುವ ಗಂಡಸರು ಶಾರ್ಟ್ಸ್ ಮತ್ತು ಮಹಿಳೆಯರು ಸ್ಕರ್ಟ್ಸ್ ಧರಿಸಿ ಕನಕ ದುರ್ಗಾ ಅಮ್ಮಾವರು ದೇವರ ದರ್ಶನ ಪಡೆಯುವಂತಿಲ್ಲ. ದೇವರ ದರ್ಶನ ಪಡೆಯಬೇಕಾದರೆ ಸಾಂಪ್ರದಾಯಿಕ ಉಡುಗೆ ಧರಿಸಲೇ ಬೇಕು ಎಂದಿದ್ದಾರೆ.

ಹೊಸವರ್ಷದಂದು ದೇವಾಲಯಕ್ಕೆ ಬರುವವರ ಸಂಖ್ಯೆ ಜಾಸ್ತಿ ಇರುತ್ತದೆ. ಹಾಗಾಗಿ ಬಟ್ಟೆ ಬದಲಿಸಲು ಬೇಕಾದ ಸೌಕರ್ಯಗಳನ್ನು ದೇವಾಲಯದಲ್ಲಿ ಒದಗಿಸಲಾಗಿದೆ.

ಬೇರೆ ರೀತಿಯ ಉಡುಗೆ ತೊಟ್ಟುಕೊಂಡು ಬರುವ ಮಹಿಳೆಯರಿಗೆ ₹100ಕ್ಕೆ ಸೀರೆ ನೀಡಲಾಗುವುದು.ಜೀನ್ಸ್ ಮತ್ತು ಸ್ಕರ್ಟ್ ವಿದೇಶಿ ಸಂಸ್ಕೃತಿ. ಹಾಗಾಗಿ ಭಾರತೀಯ ಸಂಸ್ಕೃತಿಯ ಉಡುಗೆಗಳನ್ನು ಮಾತ್ರ ಧರಿಸಿ ಎಂದು ಭಕ್ತರಿಗೆ ಹೇಳುತ್ತಿದ್ದೇವೆ ಎಂದಿದ್ದಾರೆ ಕೋಟೇಶ್ವರಮ್ಮ.

ADVERTISEMENT

ಏತನ್ಮಧ್ಯೆ, ದೇವಾಲಯದಲ್ಲಿನ ವಸ್ತ್ರ ಸಂಹಿತೆ ಬಗ್ಗೆ ಅಥಿಸ್ಟ್ ಸೆಂಟರ್‌ನ ನಿರ್ದೇಶಕಜಿ.ವಿಜಯಂ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.ದೇವಾಲಯವು ವ್ಯಕ್ತಿಗಳ ಆಯ್ಕೆಯ ಸ್ವಾತಂತ್ರ್ಯಕ್ಕೆ ತಡೆಯೊಡ್ಡಿದೆ.ಒತ್ತಾಯದಿಂದ ಬದಲಾವಣೆಗಳನ್ನು ತರುವ ಬದಲು ಪ್ರೇರಣೆ ಮೂಲಕ ಬದಲಾವಣೆ ತರಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.