ADVERTISEMENT

ಮದ್ಯ ಸೇವನೆ: ಹರಿಯಾಣದಲ್ಲಿ ವಯೋಮಿತಿ 21ಕ್ಕೆ ಇಳಿಕೆ!

ಪಿಟಿಐ
Published 23 ಡಿಸೆಂಬರ್ 2021, 12:58 IST
Last Updated 23 ಡಿಸೆಂಬರ್ 2021, 12:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದಿರುವ ಹರಿಯಾಣ ಸರ್ಕಾರವು, ರಾಜ್ಯದಲ್ಲಿ ಮದ್ಯ ಸೇವನೆಯ ಕನಿಷ್ಠ ವಯೋಮಿತಿಯನ್ನು 25ರಿಂದ 21ವರ್ಷಕ್ಕೆ ಇಳಿಸಿದೆ.

ರಾಜ್ಯ ವಿಧಾನಸಭೆಯಲ್ಲಿ ಹರಿಯಾಣ ಅಬಕಾರಿ (ತಿದ್ದುಪಡಿ) ಮಸೂದೆ 2021 ಅನ್ನು ಅಂಗೀಕರಿಸಲಾಯಿತು.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಮದ್ಯ ಸೇವನೆಯ ಕನಿಷ್ಠ ಪ್ರಾಯ ಮಿತಿಯನ್ನು 25 ವರ್ಷದಿಂದ 21ಕ್ಕೆ ಇಳಿಸಲಾಗಿದೆ.

ADVERTISEMENT

ಈ ಕುರಿತು ಮಾಹಿತಿ ನೀಡಿರುವ ಹರಿಯಾಣ ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ, ಸಮಯದಿಂದ ಸಮಯಕ್ಕೆ ಸಾಮಾಜಿಕ ಆರ್ಥಿಕ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಜನರು ಹೆಚ್ಚು ವಿದ್ಯಾ ಸಂಪನ್ನರಾಗಿದ್ದು, ಮದ್ಯ ಸೇವನೆಯ ವಿಷಯಕ್ಕೆ ಬಂದಾಗ ಹೆಚ್ಚು ವಿವೇಚನಾಶೀಲರಾಗಿದ್ದಾರೆ ಎಂದು ಮಸೂದೆ ಮಂಡನೆ ವೇಳೆ ಮಾಹಿತಿ ನೀಡಿದ್ದಾರೆ.

ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮದ್ಯ ಸೇವನೆಯ ವಯೋಮಿತಿಯನ್ನು21ಕ್ಕೆ ಮಿತಿಗೊಳಿಸಲಾಗಿದೆ ಎಂಬುದನ್ನು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.