ADVERTISEMENT

ಮದ್ಯ ಕುಡಿದು ವಾಹನ ಚಾಲನೆ ದುರ್ನಡತೆ ಮಾತ್ರವಲ್ಲ, ಅಪರಾಧವೂ ಹೌದು: ’ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 15:36 IST
Last Updated 26 ಜನವರಿ 2022, 15:36 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಗಂಭೀರವಾದ ದುರ್ನಡತೆ ಮಾತ್ರವಲ್ಲ, ಅದು ಅಪರಾಧವೂ ಹೌದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಬಿ.ವಿ.ನಾಗರತ್ನಾ ಅವರಿದ್ದ ನ್ಯಾಯಪೀಠ, ‘ಮದ್ಯ ಕುಡಿದ ಯಾವ ವ್ಯಕ್ತಿಗೂ ವಾಹನ ಚಾಲನೆ ಮಾಡಲು ಅನುಮತಿ ನೀಡಬಾರದು. ಮದ್ಯ ಕುಡಿದು ವಾಹನ ಚಾಲನೆ ಮಾಡುವುದು ಹಾಗೂ ಆ ಮೂಲಕ ಇತರರ ಜೀವದೊಂದಿಗೆ ಚೆಲ್ಲಾಟವಾಗುವುದು ಗಂಭೀರವಾದ ದುರ್ನಡತೆ’ ಎಂದು ಹೇಳಿತು.

ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ಪೊಲೀಸ್‌ (ಪಿಎಸಿ) ಪಡೆಯನ್ನು ಕರೆದೊಯ್ದ ಟ್ರಕ್‌ನ ಚಾಲಕನೊಬ್ಬ ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

ADVERTISEMENT

2000ದಲ್ಲಿ ಕುಂಭಮೇಳಕ್ಕೆ ಅಲಹಾಬಾದ್‌ನಿಂದ ಪೊಲೀಸ್‌ ಸಿಬ್ಬಂದಿಯನ್ನು ಕರೆದೊಯ್ಯುವಾಗ, ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪ ಎದುರಿಸುತ್ತಿರುವ ಟ್ರಕ್‌ ಚಾಲಕನಿಗೆ ಕಡ್ಡಾಯ ನಿವೃತ್ತಿ ನೀಡಬೇಕು’ ಎಂದು ನ್ಯಾಯಪೀಠ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.