ಡ್ರೋನ್ (ಸಾಂದರ್ಭಿಕ ಚಿತ್ರ)
-ರಾಯಿಟರ್ಸ್ ಚಿತ್ರ
ಭುಜ್ (ಗುಜರಾತ್): ಭಾರತ–ಪಾಕಿಸ್ತಾನ ಗಡಿಗೆ ಸಮೀಪ ಇರುವ ಗುಜರಾತ್‌ನ ಕಛ್ ಜಿಲ್ಲೆಯ ಗ್ರಾಮವೊಂದರಲ್ಲಿ ಗುರುವಾರ ಡ್ರೋನ್ ಮಾದರಿಯ ವಸ್ತುವೊಂದರ ಅವಶೇಷಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಕಛ್ ಜಿಲ್ಲೆಯ ಭುಜ್ ನಗರ ಸೇರಿದಂತೆ ಪೂರ್ವ ಹಾಗೂ ಉತ್ತರ ಭಾರತದ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನ ದಾಳಿ ನಡೆಸಲು ಯತ್ನಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ ಖಾವ್ಡಾ ಜಿಲ್ಲೆಯಲ್ಲಿ ಈ ಅವಶೇಷ ಪತ್ತೆಯಾಗಿದೆ.
ಅಧಿಕ ವೋಲ್ಟೇಜ್ ವಿದ್ಯುತ್ ಪ್ರಸರಣ ತಂತಿಯ ಬಳಿ ಇಂದು ಬೆಳಿಗ್ಗೆ ಡ್ರೋನ್ ಮಾದರಿಯ ವಸ್ತುವೊಂದರ ಅವಶೇಷ ಪತ್ತೆಯಾಗಿದೆ ಎಂದು ಕಛ್ ಪೂರ್ವ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸುಂಡಾ ತಿಳಿಸಿದ್ದಾರೆ.
ಅವಶೇಷ ಪತ್ತೆಯಾದ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ವಾಯುಪಡೆ ಅಧಿಕಾರಿಗಳು ಅವಶೇಷವನ್ನು ಸಂಗ್ರಹಿಸಿ ಹೆಚ್ಚಿನ ತನಿಖೆಗೆ ಭುಜ್ ವಾಯುನೆಲೆಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಡ್ರೋನ್‌ನ ಮೂಲದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅದನ್ನು ಹೊಡೆದುರಿಳಿಸಲಾಗಿದೆಯೋ ಅಥವಾ ವಿದ್ಯುತ್ ತಂತಿಗೆ ತಾಗಿ ಅವಘಡಕ್ಕೀಡಾಗಿದೆಯೋ ಎನ್ನುವುದರ ಬಗ್ಗೆ ಮಾಹಿತಿ ಗೊತ್ತಾಗಿಲ್ಲ.
ಭಾರತ–ಪಾಕಿಸ್ತಾನ ಗಡಿಯಿಂದ 20 ಕಿ.ಮೀ ದೂರದಲ್ಲಿ ಅವಶೇಷ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.