ADVERTISEMENT

ಎನ್‌ಕೌಂಟರ್‌: ಮಾದಕವಸ್ತು ಪೂರೈಕೆದಾರ ಸಾವು

ಪಿಟಿಐ
Published 8 ಆಗಸ್ಟ್ 2021, 11:34 IST
Last Updated 8 ಆಗಸ್ಟ್ 2021, 11:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ (ಪಿಟಿಐ): ಮಾದಕ ವಸ್ತುಗಳ ಪೂರೈಕೆ ಮಾಡುತ್ತಿದ್ದ ಎನ್ನಲಾದ ವ್ಯಕ್ತಿಯೊಬ್ಬರು ಭಾನುವಾರ ಇಲ್ಲಿನ ನಾಗೌನ್‌ ಜಿಲ್ಲೆಯಲ್ಲಿ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರೊಂದಿಗೆ ಇದೇ ವರ್ಷದ ಮೇ 10ರಂದು ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎನ್‌ಕೌಂಟರ್‌ನಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿದೆ.

ಖಚಿತ ಮಾಹಿತಿ ಆಧರಿಸಿ ಖಟೊವಲ್ ಪೊಲೀಸ್‌ ಠಾಣೆಯ ಅಧಿಕಾರಿ ಅಲೋಕ್ ದತ್ತಾ ಗೆರುವಾಮುಖ್‌ ಪ್ರದೇಶದಲ್ಲಿ ಶೋಧ ಕಾರ್ಯಕೈಗೊಂಡಿದ್ದರು. ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಂತೆ ಮಾದಕ ವಸ್ತು ಪೂರೈಕೆದಾರ ಹಲ್ಲೆಗೆ ಯತ್ನಿಸಿದರು. ತಮ್ಮನ್ನು ರಕ್ಷಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಯ ಕೈಗೆ ಗಾಯವಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಆತ್ಮರಕ್ಷಣೆಯ ಕ್ರಮವಾಗಿ ಅಧಿಕಾರಿ ಗುಂಡಿನ ದಾಳಿ ನಡೆಸಿದರು ಎಂದೂ ತಿಳಿಸಿದರು. ಆದರೆ, ಮಾದಕವಸ್ತು ಪೂರೈಕೆದಾರನೂ ಗುಂಡಿನ ದಾಳಿ ನಡೆಸಿದರೆ ಎಂಬುದು ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.