ADVERTISEMENT

ಕೋವಿಡ್‌ ಪತ್ತೆಗೆ ಪರಿಣಾಮಕಾರಿ ಮೊಬೈಲ್‌ ಆ್ಯಪ್‌

ಆ್ಯಪ್‌ ಅಭಿವೃದ್ದಿಪಡಿಸಿದ ಬೆಂಗಳೂರು ಮೂಲದ ಕಂಪನಿ

ಪಿಟಿಐ
Published 28 ಜುಲೈ 2020, 15:50 IST
Last Updated 28 ಜುಲೈ 2020, 15:50 IST
ಕೊರೊನಾ
ಕೊರೊನಾ   

ನವದೆಹಲಿ: ಕೋವಿಡ್‌–19 ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವ, ಪರಿಣಾಮಕಾರಿ ಮೊಬೈಲ್‌ ಆ್ಯಪ್ ಅಭಿವೃದ್ಧಿಪಡಿಸಲು ಬೆಂಗಳೂರು ಮೂಲದ ಸ್ಟಾರ್ಟ್‌ಅಪ್‌ ಅಕ್ಯುಲಿ ಲ್ಯಾಬ್‌ ಅನ್ನುವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯ್ಕೆ ಮಾಡಿದೆ.

ಲೈಫಾಸ್‌ (lyfas) ಎಂಬ ಹೆಸರಿನ ಆ್ಯಪನ್ನು ಇಲಾಖೆ ಸಹಯೋಗದಲ್ಲಿ ಅಕ್ಯುಲಿ ಲ್ಯಾಬ್ ಅಭಿವೃದ್ಧಿಪಡಿಸಿದೆ.

ಸೋಂಕಿನ ಲಕ್ಷಣಗಳನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸುವ ಜೊತೆಗೆ ಸೋಂಕಿತರ ಅಪಾಯದ ಪ್ರಮಾಣವನ್ನು ಅರಿಯಲು ಇದು ಸಹಕಾರಿಯಾಗಲಿದೆ.ಯಾವುದೇ ರೀತಿಯ ರಕ್ತದ ಮಾದರಿ ಪಡೆಯದೆ ಡಿಜಿಟಲ್‌ ವ್ಯವಸ್ಥೆಯ ಮೂಲಕವೇ ಸೋಂಕು ಲಕ್ಷಣ ಪತ್ತೆ ಹಚ್ಚುತ್ತದೆ.

ADVERTISEMENT

ಮೊಬೈಲ್‌ ಫೋನ್‌ ಕ್ಯಾಮೆರಾದ ಮೇಲೆ ಐದು ನಿಮಿಷ ತೋರು ಬೆರಳು ಇರಿಸಿದರೆ, ಸ್ಪಾರ್ಟ್‌ಫೋನ್‌ನಲ್ಲಿರುವ ‌ಪ್ರೊಸೆಸರ್ ಮತ್ತು ಸೆನ್ಸರ್‌ಗಳ ಮೂಲಕ ನಾಡಿಮಿಡಿತ ಮತ್ತುರಕ್ತದ ಒತ್ತಡದ ಬದಲಾವಣೆಯನ್ನು ಅದು ಕಂಡುಹಿಡಿಯಲಿದೆ.

ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪರೀಕ್ಷೆ ಪತ್ತೆ ಪರೀಕ್ಷೆ ನಡೆಸಲು ಅನುಕೂಲವಾಗುವ ಜೊತೆಗೆ ಸಮುದಾಯಕ್ಕೆ ಹರಡುವ ಹಂತದಲ್ಲಿ ಮತ್ತು ಕ್ವಾರಂಟೈನ್‌ನಲ್ಲಿ ಇರುವವರ ಮೇಲೆ ನಿಗಾ ಇರಿಸಲು ಇದು ನೆರವಾಗಲಿದೆ.

ಕ್ಲಿನಿಕಲ್ ಟ್ರಯಲ್‌ ಮತ್ತು ಉಳಿದ ಪ್ರಕ್ರಿಯೆಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಈ ಪರೀಕ್ಷಾ ಸೌಲಭ್ಯವು ಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.