ಡಿಟಿಎಚ್
ನವದೆಹಲಿ : ಡಿಟಿಎಚ್ ಸೇವೆಗಳ ಮೇಲೆ ರಾಜ್ಯ ಶಾಸನ ಸಭೆಗಳು ಹಾಗೂ ಸಂಸತ್ತು ಮನರಂಜನಾ ತೆರಿಗೆ ಹಾಗೂ ಸೇವಾ ತೆರಿಗೆ ವಿಧಿಸುವ ಅಧಿಕಾರ ಹೊಂದಿವೆ ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ.
ಮನರಂಜನೆಯನ್ನು ಒದಗಿಸುವ ಡಿಟಿಎಚ್ ಸೇವೆ ನೀಡುವ ಕೆಲಸದಲ್ಲಿ ಇರುವವರು ತಾವು ಪ್ರಸಾರ ಮಾಡಿದ್ದಕ್ಕೆ ಸೇವಾ ತೆರಿಗೆ ನೀಡಬೇಕು ಹಾಗೂ ಮನರಂಜನಾ ತೆರಿಗೆ ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ಪೀಠವು ಹೇಳಿದೆ.
ಮನರಂಜನಾ ತೆರಿಗೆಯನ್ನು ವಿಧಿಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ತೀರ್ಪು ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.