ADVERTISEMENT

ಬ್ರಿಟನ್‌ಗೆ ವಿದೇಶಾಂಗ ಸಚಿವ ಜೈಶಂಕರ್‌

ಪಿಟಿಐ
Published 11 ನವೆಂಬರ್ 2023, 14:46 IST
Last Updated 11 ನವೆಂಬರ್ 2023, 14:46 IST
ಎಸ್‌.ಜೈಶಂಕರ್
ಎಸ್‌.ಜೈಶಂಕರ್   

ನವದೆಹಲಿ (ಪಿಟಿಐ): ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗಾಗಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಶನಿವಾರ ತಮ್ಮ ಐದು ದಿನದ ಬ್ರಿಟನ್‌ ಪ್ರವಾಸ ಆರಂಭಿಸಿದರು.

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮುಂದಿನ ಕೆಲವು ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದ್ದು, ಲಂಡನ್‌ನಲ್ಲಿ ನಡೆಯುವ ಮಾತುಕತೆಯಲ್ಲಿ ಪ್ರಧಾನಿ ಪ್ರವಾಸದ ಸಿದ್ಧತೆಗಳ ಬಗ್ಗೆಯೂ ಚರ್ಚೆಯಾಗಲಿದೆ.

‘ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಇದೇ 15ರವರೆಗೆ ಬ್ರಿಟನ್‌ನಲ್ಲಿ ಇರಲಿದ್ದಾರೆ. ಈ ಸಂದರ್ಭ ತಮ್ಮ ಸಹವರ್ತಿ ಜೇಮ್ಸ್‌ ಕ್ಲಿವರ್ಲಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ’ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ADVERTISEMENT

‘ಭಾರತ– ಬ್ರಿಟನ್‌ ಮಾರ್ಗಸೂಚಿ 2030’ರೊಂದಿಗೆ, ಭಾರತ– ಬ್ರಿಟನ್‌ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ 2021ರಲ್ಲೇ ಆರಂಭಗೊಂಡಿದೆ. ಇದು ವಿವಿಧ ಕ್ಷೇತ್ರಗಳಲ್ಲಿನ ಬಾಂಧವ್ಯವನ್ನು ವಿಸ್ತರಿಸಲು ಯತ್ನಿಸುತ್ತಿರುತ್ತದೆ. ಈ ಮಾರ್ಗಸೂಚಿಯು ಎರಡೂ ದೇಶಗಳ ಪಾಲುದಾರಿಕೆಗೆ ಹಾಗೂ ಸ್ನೇಹಕ್ಕೆ ಬದ್ಧವಾಗಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.