ADVERTISEMENT

ಮಿಜೋರಾಂನಲ್ಲಿ ಭೂಕಂಪ: 5.3ರಷ್ಟು ತೀವ್ರತೆ

ಪಿಟಿಐ
Published 22 ಜೂನ್ 2020, 7:29 IST
Last Updated 22 ಜೂನ್ 2020, 7:29 IST
ಮಿಜೋರಾಂನಲ್ಲಿ ಭೂಕಂಪ–ಪ್ರಾತಿನಿಧಿಕ ಚಿತ್ರ
ಮಿಜೋರಾಂನಲ್ಲಿ ಭೂಕಂಪ–ಪ್ರಾತಿನಿಧಿಕ ಚಿತ್ರ   

ಐಜ್ವಾಲ್‌: ಮಿಜೋರಾಂನಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪ ಉಂಟಾಗಿದ್ದು, ತೀವ್ರತೆ ಪ್ರಮಾಣ ರಿಕ್ಟರ್‌ ಮಾಪಕದಲ್ಲಿ 5.3ರಷ್ಟು ದಾಖಲಾಗಿದೆ. ಯಾವುದೇ ಸಾವು–ನೋವು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಮುಂಜಾನೆ 4.10ರ ಸುಮಾರಿಗೆ ಭೂಕಂಪವಾಗಿದೆ.ಚಾಂಫಾಯ್ ಜಿಲ್ಲೆಯ ಜೋಖಾವ್ತರ್‌ನಭಾರತ–ಮ್ಯಾನ್ಮಾರ್‌ ಗಡಿ ಭಾಗದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, 20 ಕಿ.ಮೀ ಆಳದಲ್ಲಿ ಭೂಕಂಪ ಉಂಟಾಗಿದೆ ಎಂದು ವರದಿಯಾಗಿದೆ.

ಜೋಖಾವ್ತರ್ ಪ್ರಾಂತ್ಯದ ಚರ್ಚ್‌, ಮನೆ ಸೇರಿದಂತೆ ಹಲವು ಕಟ್ಟಡಗಳಿಗೆ ಹಾನಿ ಉಂಟಾಗಿದೆ. ಅಲ್ಲದೇ ರಸ್ತೆಗಳಲ್ಲೂ ಬಿರುಕು ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಇಂತಹ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧ ಎಂದು ಮಿಜೋರಾಂ ಮುಖ್ಯಮಂತ್ರಿ ಜೋರಾಂಥಾಂಗಾನಿ ಅವರಿಗೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.