ADVERTISEMENT

ರಾಜಸ್ಥಾನ, ಅರುಣಾಚಲ ಪ್ರದೇಶದಲ್ಲಿ ಕಂಪಿಸಿದ ಭೂಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2023, 3:01 IST
Last Updated 26 ಮಾರ್ಚ್ 2023, 3:01 IST
ಚಿತ್ರ ಕೃಪೆ: Twitter/@NCS_Earthquake
ಚಿತ್ರ ಕೃಪೆ: Twitter/@NCS_Earthquake   

ನವದೆಹಲಿ: ರಾಜಸ್ಥಾನ ಹಾಗೂ ಅರುಣಾಚಲ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿದೆ.

ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌ಸಿಎಎಸ್) ಪ್ರಕಾರ, ರಾಜಸ್ಥಾನದಲ್ಲಿ ರಿಕ್ಟರ್ ಮಾಪಕದಲ್ಲಿ 4.2 ಮತ್ತು ಅರುಣಾಚಲ ಪ್ರದೇಶದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ.

ಅರುಣಾಚಲದ ಪ್ರದೇಶ ಚಾಂಗ್‍ಲಾಂಗ್‌ನಲ್ಲಿ 76 ಕಿ.ಮೀ. ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಎನ್‌ಸಿಎಎಸ್ ಮಾಹಿತಿ ನೀಡಿದೆ.

ADVERTISEMENT

ಮತ್ತೊಂದೆಡೆ ರಾಜಸ್ಥಾನದ ಬಿಕಾನೇರ್‌ನಿಂದ ಪಶ್ಚಿಮಕ್ಕೆ 516 ಕಿ.ಮೀ. ದೂರದಲ್ಲಿ 8 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.