ADVERTISEMENT

ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ 4.3 ತೀವ್ರತೆಯ ಭೂಕಂಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2023, 12:41 IST
Last Updated 3 ಸೆಪ್ಟೆಂಬರ್ 2023, 12:41 IST
 ಭೂಕಂಪ
ಭೂಕಂಪ    (ಪ್ರಾತಿನಿಧಿಕ ಚಿತ್ರ)

ಪೋರ್ಟ್‌ಬ್ಲೇರ್‌: ಅಂಡಮಾನ್‌ – ನಿಕೋಬಾರ್‌ ದ್ವೀಪ ಸಮೂಹಗಳಲ್ಲಿ ಇಂದು ಭೂಮಿ ಕಂಪಿಸಿದೆ. ಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 4.3ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್‌) ತಿಳಿಸಿದೆ.

ಮಧ್ಯಾಹ್ನ 3.29ರ ವೇಳೆಗೆ ಸಂಭವಿಸಿದ ಕಂಪನದ ತೀವ್ರತೆ 4.3ರಷ್ಟು ದಾಖಲಾಗಿದೆ. ಭೂಕಂಪದ ಕೇಂದ್ರ ಬಿಂದು ಸಾಗರದ 10 ಕಿ.ಮೀ ಆಳದಲ್ಲಿತ್ತು. ಸುತ್ತ ಮುತ್ತಲಿನ ದ್ವೀಪಗಳಲ್ಲಿಯು ಭೂಕಂಪನದ ಅನುಭವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಂಡಮಾನ್ -ನಿಕೋಬಾರ್ ದ್ವೀಪ ಸಮೂಹದಲ್ಲಿ ವರ್ಷದಲ್ಲಿ ಹಲವು ಭಾರಿ ಭೂಮಿ ಕಂಪಿಸಿದೆ. ಈ ವರ್ಷದ ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜಧಾನಿ ದೆಹಲಿ ಸೇರಿದಂತೆ ಇದೇ ರೀತಿ ಭೂಮಿ ಕಂಪಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.