ADVERTISEMENT

ಮಿಜೋರಾಂನಲ್ಲಿ ಸತತ ನಾಲ್ಕನೇ ದಿನವೂ ಭೂಕಂಪ, ಹತ್ತಾರು ಮನೆಗಳಿಗೆ ಹಾನಿ

ಏಜೆನ್ಸೀಸ್
Published 24 ಜೂನ್ 2020, 5:13 IST
Last Updated 24 ಜೂನ್ 2020, 5:13 IST
ಭೂಕಂಪದ ತೀವ್ರತೆಗೆ ಮನೆಯೊಂದರ ಗೋಡೆ ಬಿರುಕುಬಿಟ್ಟಿರುವುದು
ಭೂಕಂಪದ ತೀವ್ರತೆಗೆ ಮನೆಯೊಂದರ ಗೋಡೆ ಬಿರುಕುಬಿಟ್ಟಿರುವುದು   

ಐಜ್ವಾಲ್: ಮಿಜೋರಾಂನ ಚಂಪಾಯಿ ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರೊಂದಿಗೆ, ರಾಜ್ಯದಲ್ಲಿ ಸತತ ನಾಲ್ಕನೇ ದಿನ ಭೂಕಂಪನವಾಗಿದೆ.

ಭಾನುವಾರ, ಸೋಮವಾರ ಮತ್ತು ಮಂಗಳವಾರಗಳಂದು ರಾಜ್ಯದ ಕೆಲವೆಡೆ ಸಂಭವಿಸಿದ ಭೂಕಂಪದಿಂದ ಅನೇಕ ಮನೆಗಳಿಗೆ ಹಾನಿಯಾಗಿದೆ. ಹಲವೆಡೆ ರಸ್ತೆಗಳಲ್ಲಿ, ಹೆದ್ದಾರಿಗಳಲ್ಲಿ ಬಿರುಕು ಉಂಟಾಗಿದೆ. ಮಳೆ ಮತ್ತು ಭೂಕುಸಿತದ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಮುಂದಿನ ಐದು ದಿನಗಳಲ್ಲಿ ಭಾರಿ ಮಳೆ ಮತ್ತು ಭೂಕುಸಿತಗಳು ಉಂಟಾಗುವ ಸಾಧ್ಯತೆ ಇದೆ. ಸಂಭಾವ್ಯ ಭೂಕುಸಿತ ಭೀತಿ ಇರುವ ಪ್ರದೇಶಗಳ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.