
ಪಿಟಿಐ
ನರೇಂದ್ರ ಮೋದಿ
ನವದೆಹಲಿ: ‘ನ್ಯಾಯ ಕೇಳುವವರಿಗೆ ನ್ಯಾಯಾಂಗದ ಭಾಷೆಯು ಅರ್ಥವಾಗುವಂತೆ ಇರಬೇಕು. ಆಗ ಮಾತ್ರವೇ ಜನರ ಬದುಕು ಸುಲಭವಾಗುತ್ತದೆ. ಕಾನೂನಿನ ಭಾಷೆಯನ್ನು ಸರಳಗೊಳಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ನ್ಯಾಯದಾನ ವ್ಯವಸ್ಥೆಯನ್ನು ಬಲಗೊಳಿಸುವ ಕುರಿತು ಇಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನ್ಯಾಯಾಂಗದ ಭಾಷೆಯನ್ನು ಸರಳಗೊಳಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದನ್ನು ಮುಂದುವರಿಸಲಾಗುವುದು’ ಎಂದರು.
‘ಕಾನೂನಿನ ಭಾಷೆ ಅರ್ಥವಾದರೆ ಮಾತ್ರವೇ ಜನರು ತಮ್ಮ ಹಕ್ಕುಗಳನ್ನು ಕೇಳಲು ಸಾಧ್ಯ. ತೀರ್ಪುಗಳು ಮತ್ತು ಕಾನೂನಿನ ದಾಖಲೆಗಳು ಎಲ್ಲ ಸ್ಥಳೀಯ ಭಾಷೆಯಲ್ಲಿ ದೊರೆಯುವಂತಾಗಬೇಕು. ಸುಪ್ರೀಂ ಕೋರ್ಟ್ ಈ ಬಗ್ಗೆ ಹಲವು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.