ADVERTISEMENT

111 ನಿಷ್ಕ್ರಿಯ ಪಕ್ಷಗಳ ಕೈಬಿಡಲು ಚುನಾವಣಾ ಆಯೋಗ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 18:24 IST
Last Updated 20 ಜೂನ್ 2022, 18:24 IST
   

ನವದೆಹಲಿ:ವ್ಯವಸ್ಥೆಯ ಶುದ್ಧೀಕರಣದ ಉದ್ದೇಶದಿಂದ ಚುನಾವಣಾ ಆಯೋಗವು (ಇಸಿ) ಅಸ್ತಿತ್ವದಲ್ಲಿಲ್ಲದ 111 ರಾಜಕೀಯ ಪಕ್ಷಗಳನ್ನುತನ್ನ ರಿಜಿಸ್ಟರ್‌ನಿಂದ ತೆಗೆದುಹಾಕಲು ಸೋಮವಾರ ನಿರ್ಧರಿಸಿದೆ.

ಚುನಾವಣಾ ಸಮಿತಿಯ ಪ್ರಕಾರ, ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಪರಿಶೀಲನೆ ವೇಳೆ 111 ನೋಂದಾಯಿತ, ಗುರುತಿಸಲ್ಪಡದ ರಾಜಕೀಯ ಪಕ್ಷಗಳು ‘ಅಸ್ತಿತ್ವದಲ್ಲಿಲ್ಲ’ ಎಂದು ವರದಿ ನೀಡಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.ಸಾಮಾನ್ಯ ಚುನಾವಣಾ ಚಿಹ್ನೆಯ ಹಂಚಿಕೆ ಸೇರಿ ಈ ಪಕ್ಷಗಳಿಗೆ ನೀಡಲಾದ ವಿವಿಧ ಸೌಲಭ್ಯಗಳನ್ನು ಹಿಂಪಡೆಯಲು ಇಸಿ ನಿರ್ಧರಿಸಿದೆ.ಈ ತಿಂಗಳ ಆರಂಭದಲ್ಲಿ, ಇಸಿ ತನ್ನ ರಿಜಿಸ್ಟರ್‌ನಿಂದ ಅಸ್ತಿತ್ವದಲ್ಲಿಲ್ಲದ 87 ರಾಜಕೀಯ ಪಕ್ಷಗಳನ್ನು ತೆಗೆದುಹಾಕಿತ್ತು.

ಯಾವುದೇ ನೋಂದಾಯಿತ ಗುರುತಿಸದ ರಾಜಕೀಯ ಪಕ್ಷವು (ಆರ್‌ಯುಪಿಪಿ) ಅಸ್ತಿತ್ವದ ಸಾಕ್ಷ್ಯಗಳು, ವಾರ್ಷಿಕ ಲೆಕ್ಕಪರಿಶೋಧನೆ ವರದಿಗಳು, ಖಾತೆಗಳು, ದೇಣಿಗೆ ವರದಿ, ವೆಚ್ಚದ ವರದಿ ಮತ್ತು ನವೀಕರಿಸಿದ ಪಟ್ಟಿಯೊಂದಿಗೆ ಸಂಬಂಧಿಸಿದ ಸಿಇಒ ಅವರನ್ನು 30 ದಿನಗಳೊಳಗೆ ಸಂಪರ್ಕಿಸಬಹುದು ಎಂದು ಚುನಾವಣಾ ಸಮಿತಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.