ADVERTISEMENT

ಸೂಕ್ತ ಸಮಯದಲ್ಲಿ ಉಪಚುನಾವಣೆ ವೇಳಾಪಟ್ಟಿ ಘೋಷಣೆ: ಕೇಂದ್ರ ಚುನಾವಣಾ ಆಯೋಗದ ಹೇಳಿಕೆ

ಪಿಟಿಐ
Published 24 ಜುಲೈ 2020, 12:32 IST
Last Updated 24 ಜುಲೈ 2020, 12:32 IST
ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಕಚೇರಿ –ಪಿಟಿಐ ಚಿತ್ರ
ದೆಹಲಿಯಲ್ಲಿರುವ ಕೇಂದ್ರ ಚುನಾವಣಾ ಆಯೋಗದ ಕಚೇರಿ –ಪಿಟಿಐ ಚಿತ್ರ   

ನವದೆಹಲಿ: ಖಾಲಿ ಇರುವ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳಿಗೆ ಉಪ‍ಚುನಾವಣೆ ನಡೆಸಲು ‘ಸೂಕ್ತ ಸಮಯ’ದಲ್ಲಿ ವೇಳಾಪಟ್ಟಿ ಪ್ರಕಟಿಸುವುದಾಗಿ ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಹೇಳಿದೆ.

‘ಉಪಚುನಾವಣೆ ಕುರಿತ ಪರಿಶೀಲನೆಯ ನಂತರ ಆಯೋಗವು ಶುಕ್ರವಾರ ಈ ತೀರ್ಮಾನವನ್ನು ಕೈಗೊಂಡಿದೆ’ ಎಂದು ಚುನಾವಣಾ ಆಯೋಗದ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಒಟ್ಟು 57 ಸ್ಥಾನಗಳಿಗೆ ಉಪಚುನಾವಣೆ ನಡೆಯಬೇಕಿದ್ದು, ಇದರಲ್ಲಿ 56 ವಿಧಾನಸಭಾ ಸ್ಥಾನಗಳು ಮತ್ತು ಒಂದು ಲೋಕಸಭಾ ಸ್ಥಾನ ಸೇರಿದೆ. ಆದರೆ, ಬಾಕಿ ಇರುವ ಎಲ್ಲಾ ಉಪಚುನಾವಣೆಗಳ ಕುರಿತು ನಿರ್ಧಾರ ಕೈಗೊಳ್ಳಲಾಗಿದೆಯೇ ಎನ್ನುವ ಕುರಿತು ಚುನಾವಣಾ ಆಯೋಗ ಸ್ಪಷ್ಟಪಡಿಸಿಲ್ಲ.

ADVERTISEMENT

ಪ್ರವಾಹ ಮತ್ತು ಕೋವಿಡ್‌–19 ಕಾರಣಕ್ಕಾಗಿ ಎಂಟು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡುವ ಕುರಿತು ನಿರ್ಧಾರ ಕೈಗೊಂಡ ಬಳಿಕ, ಆಯೋಗದಿಂದ ಈ ಪ್ರಕಟಣೆ ಹೊರಬಿದ್ದಿದೆ. ಮುಂದೂಡಿದ ಕ್ಷೇತ್ರಗಳಿಗೆ ನೀಡಿದ ಆರು ತಿಂಗಳ ಚುನಾವಣಾ ಗಡುವು ಸೆಪ್ಟೆಂಬರ್ ಏಳಕ್ಕೆ ಕೊನೆಗೊಳ್ಳಲಿದೆ. ಉಳಿದ 49 ಕ್ಷೇತ್ರಗಳಿಗೆ ಸೆಪ್ಟೆಂಬರ್ ನಂತರ ಉ‍ಪ‍ಚುನಾವಣೆಗಳು ನಡೆಯುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.