ಚುನಾವಣಾ ಆಯೋಗ
ನವದೆಹಲಿ: ಎಲ್ಲ ಮತಗಟ್ಟೆಗಳಲ್ಲೂ ವೆಬ್‌ಕಾಸ್ಟಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ಚುನಾವಣಾ ಆಯೋಗ ಸೋಮವಾರ ನಿರ್ಧರಿಸಿದೆ. ಈ ಮೊದಲು ಶೇ 50ರಷ್ಟು ಮತಗಟ್ಟೆಗಳಲ್ಲಿ ಮಾತ್ರ ವೆಬ್‌ಕಾಸ್ಟಿಂಗ್ ಮಾಡಲು ಅವಕಾಶವಿತ್ತು.
ಮತದಾನ ದಿನಗಳಲ್ಲಿ ಮತದಾನದ ಪ್ರಕ್ರಿಯೆ ಮೇಲೆ ಹೆಚ್ಚಿನ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ.
ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಶೇ 100ರಷ್ಟು ವೆಬ್‌ಕಾಸ್ಟಿಂಗ್ ಜಾರಿಗೆ ತರುವ ಮೊದಲ ರಾಜ್ಯವಾಗಲಿದೆ. ‘ಇಂಟರ್‌ನೆಟ್ ಸಂಪರ್ಕವಿರುವ ಪ್ರದೇಶಗಳಲ್ಲಿ ವೆಬ್‌ಕಾಸ್ಟಿಂಗ್ ಮಾಡಬೇಕು. ಇಂಟರ್‌ನೆಟ್ ಸಂಪರ್ಕ ದೊರೆಯದ ಪ್ರದೇಶಗಳಲ್ಲಿ ವಿಡಿಯೊಗ್ರಫಿ, ಫೋಟೊಗ್ರಫಿಯಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು’ ಎಂದು ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.