ADVERTISEMENT

ಹಣ ಅಕ್ರಮ ವರ್ಗಾವಣೆ ‍ಪ್ರಕರಣ: ಛತ್ತೀಸಗಡ ಸಿಎಂ ಬಘೇಲ್ ಉಪ ಕಾರ್ಯದರ್ಶಿ ಬಂಧನ

ಪಿಟಿಐ
Published 2 ಡಿಸೆಂಬರ್ 2022, 12:55 IST
Last Updated 2 ಡಿಸೆಂಬರ್ 2022, 12:55 IST
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ (ಪಿಟಿಐ ಚಿತ್ರ)
ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ (ಪಿಟಿಐ ಚಿತ್ರ)   

ರಾಯ್‌ಪುರ:ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕಚೇರಿಯ ಉಪ ಕಾರ್ಯದರ್ಶಿ ಸೌಮ್ಯಾಚೌರಾಸಿಯಾ ಅವರನ್ನುಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ (ಪಿಎಂಎಲ್‌ಎ) ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.

ರಾಜ್ಯದಲ್ಲಿ ನಡೆದಿರುವಗಣಿ ತೆರಿಗೆ ಹಗರಣಕ್ಕೆ ಸಂಬಂಧಿಸಿದತನಿಖೆಯ ವೇಳೆ,ಪಿಎಂಎಲ್‌ಎನ ಕ್ರಿಮಿನಲ್‌ ಸೆಕ್ಷನ್‌ಗಳಅಡಿಯಲ್ಲಿ ಚೌರಾಸಿಯಾ ಅವರನ್ನು ಬಂಧಿಸಲಾಗಿದೆ. ಅವರು ಸರ್ಕಾರದ ಪ್ರಭಾವಿ ಅಧಿಕಾರಿ ಎನಿಸಿದ್ದರು. ಬಂಧನದ ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಾಜ್ಯದಿಂದ ರಫ್ತಾಗುವಪ್ರತಿ ಟನ್‌ ಕಲ್ಲಿದ್ದಲಿಗೆಅಕ್ರಮವಾಗಿ ₹ 25 ಸುಂಕ ವಿಧಿಸಲಾಗಿದೆ. ಈ ಭಾರಿ ಹಗರಣದಲ್ಲಿ ಹಿರಿಯ ಅಧಿಕಾರಿಗಳು, ಉದ್ಯಮಿಗಳು, ರಾಜಕಾರಣಿಗಳು ಮತ್ತು ಮಧ್ಯವರ್ತಿಗಳು ಭಾಗಿಯಾಗಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿಕೊಂಡಿತ್ತು. ಅದರಂತೆ ಇ.ಡಿ. ರಾಜ್ಯದಾದ್ಯಂತ ಕಾರ್ಯಾಚರಣೆ ಆರಂಭಿಸಿತ್ತು.

ADVERTISEMENT

ಐಎಎಸ್‌ ಅಧಿಕಾರಿ ಸಮೀರ್‌ ಬಿಷ್ಣೋಯಿ ಹಾಗೂ ಇನ್ನಿಬ್ಬರನ್ನುಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು.

ಇ.ಡಿ ಕಾರ್ಯಾಚರಣೆ ವಿರುದ್ಧ ಕಳೆದವಾರ ವಾಗ್ದಾಳಿ ನಡೆಸಿದ್ದ ಬಘೇಲ್‌ ಅವರು, ತನಿಖಾ ಸಂಸ್ಥೆಯು ತನ್ನ ಮಿತಿ ಮೀರುತ್ತಿದೆ. ರಾಜ್ಯದ ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.