ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ : ಹೈದರಾಬಾದ್ ಮೂಲದ ಉದ್ಯಮಿ ಅರುಣ್ ಪಿಳ್ಳೈ ಬಂಧನ

ಐಎಎನ್ಎಸ್
Published 7 ಮಾರ್ಚ್ 2023, 6:12 IST
Last Updated 7 ಮಾರ್ಚ್ 2023, 6:12 IST
   

ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಸೋಮವಾರ ನವದೆಹಲಿಯಲ್ಲಿ ಅವರನ್ನು ವಿಚಾರಣೆ ನಡೆಸಿದ ಇಡಿ ತಡರಾತ್ರಿ ಅವರನ್ನು ವಶಕ್ಕೆ ಪಡೆದುಕೊಂಡಿದೆ. ಹೈದರಾಬಾದ್‌ನ ಕೋಕಾಪೇಟ್‌ನಲ್ಲಿರುವ ಪಿಳ್ಳೈ ಅವರ ನಿವಾಸದ ಮೇಲೆ ಈ ಹಿಂದೆ ದಾಳಿ ನಡೆಸಿದ್ದ ಇಡಿ ಅವರ ಆಸ್ತಿಯನ್ನು ಜಪ್ತಿ ಮಾಡಿತ್ತು.

ಪಿಳ್ಳೈ ಅವರು ದಕ್ಷಿಣ ಭಾರತದ ಮದ್ಯ ತಯಾರಕರ ಗುಂಪಿನ ಪ್ರಮುಖರು. ಪಿಳ್ಳೈ ಮತ್ತೊಬ್ಬ ಆರೋಪಿ ಇಂಡೋಸ್ಪಿರಿಟ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹೇಂದ್ರು ಅವರಿಂದ ಲಂಚವನ್ನು ಸಂಗ್ರಹಿಸಿ ಇತರ ಆರೋಪಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಇಡಿ ಆರೋಪಿಸಿದೆ.

ADVERTISEMENT

ಪಿಳ್ಳೈ ಅವರಿಗೆ ಇಂಡೋಸ್ಪಿರಿಟ್‌ನಲ್ಲಿ ಶೇಕಡಾ 32.5 ರಷ್ಟು ಷೇರುಗಳನ್ನು ನೀಡಲಾಗಿದೆ. ಇದರಿಂದ ₹ 68 ಕೋಟಿ ಲಾಭವಾಗಿದೆ. ಈ ಮೊತ್ತದಲ್ಲಿ ₹ 29 ಕೋಟಿ ಪಿಳ್ಳೈ ಅವರ ಬ್ಯಾಂಕ್ ಖಾತೆಗಳಿಗೆ ಮತ್ತು ಇತರ ಸಂಬಂಧಿತ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಇಡಿ ಹೇಳಿದೆ.

ಜನವರಿಯಲ್ಲಿ ಹೈದರಾಬಾದ್‌ನಲ್ಲಿ ಪಿಳ್ಳೈ ಒಡೆತನದ ₹ 2.25 ಕೋಟಿ ಮೌಲ್ಯದ ಭೂಮಿಯನ್ನು ಇಡಿ ವಶಪಡಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.