ADVERTISEMENT

ರಾಜಕೀಯ ವಿರೋಧಿಗಳ ದನಿ ಅಡಗಿಸಲು ಇ.ಡಿ ಬಳಕೆ: ಶರದ್‌ ಪವಾರ್‌

ಪಿಟಿಐ
Published 20 ಜನವರಿ 2024, 13:19 IST
Last Updated 20 ಜನವರಿ 2024, 13:19 IST
ಶರದ್‌ ಪವಾರ್‌
ಶರದ್‌ ಪವಾರ್‌   

ಸೊಲ್ಲಾಪುರ: ‘ಜಾರಿ ನಿರ್ದೇಶನಾಲಯವನ್ನು (ಇ.ಡಿ) ರಾಜಕೀಯ ವಿರೋಧಿಗಳ ದನಿ ಅಡಗಿಸಲು ಹಾಗೂ ಅವರಲ್ಲಿ ಭಯ ಉಂಟು ಮಾಡುವ ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಶನಿವಾರ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್‌ನಲ್ಲಿ (ಎಂಎಸ್‌ಸಿಬಿ) ನಡೆದಿದೆ ಎನ್ನಲಾದ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮೊಮ್ಮಗ ಮತ್ತು ಪಕ್ಷದ ಶಾಸಕ ರೋಹಿತ್‌ ಪವಾರ್‌ ಅವರಿಗೆ ಇದೇ 24ರಂದು ವಿಚಾರಣೆಗೆ ಹಾಜರಾಗಬೇಕೆಂದು ಇ.ಡಿ ಸಮನ್ಸ್‌ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯಿಸಿದರು.

‘ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇಂಥ ಪ್ರವೃತ್ತಿಗಳನ್ನು ಹತ್ತಿಕ್ಕಲು ನಾವು ಜನರ ಬಳಿ ಹೋಗಬೇಕು’ ಎಂದು ಅವರು ವಾಗ್ದಾಳಿ ನಡೆಸಿದರು.

ADVERTISEMENT

ಎಂಎಸ್‌ಸಿಬಿಯಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ ಎಫ್‌ಐಆರ್‌ ದಾಖಲಿಸಿತ್ತು. ಈ ಎಫ್‌ಐಆರ್‌ ಆಧಾರದ ಮೇರೆಗೆ ಇ.ಡಿಯು ಶಾಸಕ ರೋಹಿತ್‌ ಪವಾರ್‌ ಅವರ ಒಡೆತನದ ಬಾರಾಮತಿ ಆಗ್ರೊ ಕಂಪನಿ ಹಾಗೂ ಕಂಪನಿಗೆ ಸಂಬಂಧಿಸಿದ ಪುಣೆ, ಔರಂಗಾಬಾದ್‌ನಲ್ಲಿನ ಕೆಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.