ಜಾರಿ ನಿರ್ದೇಶನಾಲಯ
ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ವಿವಿಧ ಪಕ್ಷಗಳ 193 ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಈ ಪೈಕಿ ಎರಡು ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಸಿಪಿಎಂ ಸದಸ್ಯ ಎ.ಎ. ರಹೀಂ ಅವರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಯಾವ ರಾಜಕಾರಣಿಗಳ ಮೇಲೆ ಇ.ಡಿ ಪ್ರಕರಣ ದಾಖಲಿಸಿದೆಯೊ ಅವರ ಪಕ್ಷವಾರು ಮಾಹಿತಿಯನ್ನು ಸರ್ಕಾರ ನಿರ್ವಹಿಸಿಲ್ಲ. ಜೊತೆಗೆ, ರಾಜ್ಯವಾರು ಮಾಹಿತಿಯನ್ನೂ ನಾವು ನಿರ್ವಹಿಸಿಲ್ಲ.
ಜಾರಿ ನಿರ್ದೇಶನಾಲಯದ ತನಿಖೆಯ ಪಾರದರ್ಶಕತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸರ್ಕಾರ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಸುಧಾರಣೆಗಳನ್ನು ತೆಗೆದುಕೊಂಡಿದ್ದರೆ ಈ ಬಗ್ಗೆ ಮಾಹಿತಿ ನೀಡಿ
ಉತ್ತರ: ಜಾರಿ ನಿರ್ದೇಶನಾಲಯವು ಸಾಕ್ಷ್ಯಾಧಾರಗಳ ಮೇಲೆ ತನಿಖೆ ಕೈಗೆತ್ತಿಕೊಳ್ಳುತ್ತದೆಯೇ ಹೊರತು, ವ್ಯಕ್ತಿಯ ಪಕ್ಷ, ಧರ್ಮ ಅಥವಾ ಇನ್ನಾವುದೇ ವಿಚಾರಗಳ ಆಧಾರಗಳ ಮೇಲಲ್ಲ. ತನಿಖಾ ಸಂಸ್ಥೆಯ ಕಾರ್ಯವೈಖರಿಯೂ ನ್ಯಾಯಾಂಗದ ವಿಮರ್ಶೆಗೆ ಮುಕ್ತವಾಗಿದೆ.
(ಸಚಿವರ ಉತ್ತರ ಸಂಕ್ಷಿಪ್ತ ರೂಪ ನೀಡಲಾಗಿದೆ)
ಆಧಾರ: ಸಚಿವ ಪಂಕಜ್ ಚೌಧರಿ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.