ADVERTISEMENT

ಹಣ ಅಕ್ರಮ ವರ್ಗಾವಣೆ ಪ್ರಕರಣ: ಸೆಂಥಿಲ್‌ ಬಾಲಾಜಿಗೆ ಆ.25ರವರೆಗೆ ನ್ಯಾಯಾಂಗ ಬಂಧನ

ಪಿಟಿಐ
Published 12 ಆಗಸ್ಟ್ 2023, 15:24 IST
Last Updated 12 ಆಗಸ್ಟ್ 2023, 15:24 IST
ಸೆಂಥಿಲ್‌ ಬಾಲಾಜಿ
ಸೆಂಥಿಲ್‌ ಬಾಲಾಜಿ   

ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿರುವ ತಮಿಳುನಾಡಿನ ಸಚಿವ ವಿ. ಸೆಂಥಿಲ್‌ ಬಾಲಾಜಿ ಅವರ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಅವರನ್ನು ಸೆಷನ್ಸ್‌ ಕೋರ್ಟ್‌ಗೆ ಶನಿವಾ‌ರ ಹಾಜರುಪಡಿಸಿತು.

ಬಾಲಾಜಿ ಅವರಿಗೆ ಪ್ರಧಾನ ಸೆಷನ್ಸ್‌ ನ್ಯಾಯಾಧೀಶ ಎಸ್‌. ಅಲ್ಲಿ ಅವರು ಇದೇ 25ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಸೆಂಥಿಲ್ ಬಾಲಾಜಿಯವರನ್ನು ಐದು ದಿನಗಳ ಕಾಲ ಇ.ಡಿ ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಧೀಶರು ಆಗಸ್ಟ್ 7ರಂದು ‌ಅನುಮತಿಸಿದ್ದರು. 

ADVERTISEMENT

ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಲಂಚ ಪಡೆದ ಹಗರಣಕ್ಕೆ ಸಂಬಂಧಿಸಿ ಬಾಲಾಜಿ ಅವರನ್ನು ಜೂನ್‌ನಲ್ಲಿ ಇ.ಡಿ ಬಂಧಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.