ADVERTISEMENT

ಬಿಎಸ್‌ಪಿ ಸಂಸದ ಅಫ್ಜಲ್‌ ಅನ್ಸಾರಿ ನಿವಾಸದ ಮೇಲೆ ಇ.ಡಿ ದಾಳಿ

ಪಿಟಿಐ
Published 18 ಆಗಸ್ಟ್ 2022, 11:49 IST
Last Updated 18 ಆಗಸ್ಟ್ 2022, 11:49 IST
ಅಫ್ಜಲ್‌ ಅವರ ನಿವಾಸದ ಎದುರು ಭದ್ರತೆಗಾಗಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್‌ ಸಿಬ್ಬಂದಿ–ಪಿಟಿಐ ಚಿತ್ರ
ಅಫ್ಜಲ್‌ ಅವರ ನಿವಾಸದ ಎದುರು ಭದ್ರತೆಗಾಗಿ ನಿಯೋಜನೆಗೊಂಡಿರುವ ಸಿಆರ್‌ಪಿಎಫ್‌ ಸಿಬ್ಬಂದಿ–ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಅಫ್ಜಲ್‌ ಅನ್ಸಾರಿ ಅವರ ಅಧಿಕೃತ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

‘ಅಫ್ಜಲ್‌ ಅವರ ತಮ್ಮ ಮುಖ್ತಾರ್‌ ಅನ್ಸಾರಿ, ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಇದರ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು, ಕೇಂದ್ರ ದೆಹಲಿಯ ಜನಪಥ್‌ನಲ್ಲಿರುವ ಅಫ್ಜಲ್‌ ಅವರ ನಿವಾಸದ ಮೇಲೆ ದಾಳಿ ಮಾಡಿ ಸಿಆರ್‌‍‍ಪಿಎಫ್‌ ಭದ್ರತೆಯಲ್ಲಿ ಶೋಧ ನಡೆಸಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಗಾಜಿಪುರ, ಮೊಹಮ್ಮದಾಬಾದ್‌, ಮೌ ಹಾಗೂ ಲಖನೌದಲ್ಲಿಮುಖ್ತಾರ್‌ ಹಾಗೂ ಅವರ ಸಹವರ್ತಿಗಳಿಗೆ ಸೇರಿದ ಸ್ಥಳಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

ಗೂಂಡಾ ಹಾಗೂ ರಾಜಕಾರಣಿಯಾಗಿರುವ ಮುಖ್ತಾರ್‌, ಸದ್ಯ ಬಾಂದಾ ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಕೊಲೆ, ಸುಲಿಗೆ, ಭೂ ಕಬಳಿಕೆ ಸೇರಿದಂತೆ ಒಟ್ಟು 49 ಅಪರಾಧ ಪ್ರಕರಣಗಳು ದಾಖಲಾಗಿವೆ.

ಉತ್ತರ ‍ಪ್ರದೇಶ ಪೊಲೀಸರು ಗೂಂಡಾ ಕಾಯ್ದೆಯಡಿ ಅಫ್ಜಲ್‌ ಅವರಿಗೆ ಸೇರಿದ್ದ ₹14.90 ಕೋಟಿ ಮೌಲ್ಯದ ಆಸ್ತಿಯನ್ನು ಜುಲೈನಲ್ಲಿ ಜಪ್ತಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.