ADVERTISEMENT

ತರಬೇತಿ ವಿಮಾನ ಖರೀದಿಯಲ್ಲಿ ಅಕ್ರಮ ಆರೋಪ: ವಿವಿಧೆಡೆ ಇ.ಡಿ ದಾಳಿ

ಪಿಟಿಐ
Published 7 ಆಗಸ್ಟ್ 2020, 13:17 IST
Last Updated 7 ಆಗಸ್ಟ್ 2020, 13:17 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ : ಭಾರತೀಯ ವಾಯುಪಡೆಗೆ (ಐಎಎಫ್) 2009ರಲ್ಲಿ 75 ಪೈಲಟ್‌ಗಳ ತರಬೇತಿ ವಿಮಾನ ಖರೀದಿ ವೇಳೆ ಭ್ರಷ್ಟಾಚಾರ ಆರೋಪ ಹಾಗೂ ಹಣ ಅಕ್ರಮ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಶುಕ್ರವಾರ ವಿವಿಧ ನಗರಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿಯೇ ವಿವಿಧ 12 ಸ್ಥಳಗಳು, ಸೂರತ್ ಮತ್ತು ಗುರುಗ್ರಾಮದ ತಲಾ ಒಂದು ಕಡೆ ದಾಳಿ ನಡೆದಿದೆ. ಹಣ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅನ್ವಯ ಪ್ರಕರಣ ದಾಖಲಿಸಿರುವ ಕೇಂದ್ರ ತನಿಖಾ ಸಂಸ್ಥೆಯು, ಪೂರಕ ದಾಖಲೆಗಳನ್ನು, ಸಾಕ್ಷ್ಯವನ್ನು ಸಂಗ್ರಹಿಸುವ ಕ್ರಮವಾಗಿ ಈ ದಾಳಿ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಮಧ್ಯವರ್ತಿಯಾಗಿದ್ದ ಶಸ್ತ್ರಾಸ್ತ್ರ ಸಲಹೆಗಾರ ಸಂಜಯ್ ಭಂಡಾರಿ ಅವರು ತಲೆಮರೆಸಿಕೊಂಡಿರುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಭಂಡಾರಿ ಅವರು ಈಗಾಗಲೇ ನಿಗದಿತ ಆದಾಯ ಮೀರಿದ ಆಸ್ತಿ ಹೊಂದಿರುವ ಪ್ರಕರಣಗಳಿಗೆ ಸಂಬಂಧಿಸಿ ಇ.ಡಿ ಮತ್ತು ಸಿಬಿಐ ತನಿಖೆಯನ್ನು ಎದುರಿಸುತ್ತಿದ್ದಾರೆ. ಭಂಡಾರಿ ಸದ್ಯ ಯು.ಕೆಯಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.