ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಿವಸೇನೆ ಸಂಸದೆ ಭಾವನಾಗೆ ಇ.ಡಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 8:12 IST
Last Updated 29 ಸೆಪ್ಟೆಂಬರ್ 2021, 8:12 IST
ಶಿವಸೇನೆ ಸಂಸದೆ ಭಾವನಾ ಗವಳಿ
ಶಿವಸೇನೆ ಸಂಸದೆ ಭಾವನಾ ಗವಳಿ   

ಮುಂಬೈ:ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಅಕ್ಟೋಬರ್‌ 4ರಂದು ವಿಚಾರಣೆಗೆ ಹಾಜರಾಗುವಂತೆಶಿವಸೇನೆ ಸಂಸದೆ ಭಾವನಾ ಗವಳಿ ಅವರಿಗೆಜಾರಿ ನಿರ್ದೇಶನಾಲಯವು (ಇ.ಡಿ)ನೋಟಿಸ್‌ ಜಾರಿಮಾಡಿದೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

ಅಕ್ಟೋಬರ್‌ 4ರಂದು ದಕ್ಷಿಣ ಮುಂಬೈನ ಇ.ಡಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಇ.ಡಿ ಮಂಗಳವಾರ ಭಾವನಾ ಗವಳಿ ಅವರ ಆಪ್ತ ಸಯೀದ್‌ ಖಾನ್‌ ಅವರನ್ನು ಬಂಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.