ADVERTISEMENT

ಶಿಕ್ಷಕ ಹುದ್ದೆಗೆ ಶೇ 50 ಅಂಕ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 15 ಜುಲೈ 2018, 19:09 IST
Last Updated 15 ಜುಲೈ 2018, 19:09 IST

ನವದೆಹಲಿ: ಒಂದರಿಂದ ಐದನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆಯಬೇಕಾದರೆ ಇನ್ನು ಮುಂದೆ ಬಿ.ಇಡಿ ಪದವಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಕನಿಷ್ಠ ಶೇ 50ರಷ್ಟು ಅಂಕ ಗಳಿಸಿರಲೇಬೇಕು.

ಶಿಕ್ಷಕರಾಗಿ ನೇಮಕಾತಿಯಾಗುವ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಠ ಅರ್ಹತೆಗಳ ನಿಯಮಾವಳಿಗೆ ಎನ್‌ಸಿಟಿಇ ತಿದ್ದುಪಡಿ ಮಾಡಿದೆ.

‘ಬಿ.ಇಡಿ ಮತ್ತು ಪ್ರೌಢಶಿಕ್ಷಣದಲ್ಲಿ ಶೇ 50 ಅಂಕ ಪಡೆದಿರಬೇಕು’ ಎಂಬ ಹೊಸ ನಿಯಮ ಸೇರಿಸಿದೆ. ಪರಿಷ್ಕೃತ ನಿಯಮಾವಳಿಯ ಹೊಸ ಅಧಿಸೂಚನೆಯನ್ನು ಎನ್‌ಸಿಟಿಇ ಇತ್ತೀಚಿನ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದೆ. ದೇಶದ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಗುಣಮಟ್ಟದ ಶಿಕ್ಷಕರನ್ನು ನೇಮಕ ಮಾಡುವುದು ಈ ಹೊಸ ನಿಯಮದ ಉದ್ದೇಶವಾಗಿದೆ.

ADVERTISEMENT

ಶಿಕ್ಷಕರಾಗಿ ನೇಮಕಗೊಂಡ ಎರಡು ವರ್ಷಗಳ ಒಳಗೆ ರಾಷ್ಟ್ರೀಯ ತಾಂತ್ರಿಕ ಶಿಕ್ಷಣ ಸಮಿತಿ ಅನುಮೋದಿತ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ 6 ತಿಂಗಳ ಬ್ರಿಡ್ಜ್‌ ಕೋರ್ಸ್‌ (ಸೇತುಬಂಧ) ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.