ADVERTISEMENT

ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ₹1.11 ಕೋಟಿ ದೇಣಿಗೆ ನೀಡಿದ ಶಿಕ್ಷಣ ಸಂಸ್ಥೆ

ಪಿಟಿಐ
Published 5 ಸೆಪ್ಟೆಂಬರ್ 2025, 6:24 IST
Last Updated 5 ಸೆಪ್ಟೆಂಬರ್ 2025, 6:24 IST
   

ತಿರುಪತಿ (ಆಂಧ್ರಪ್ರದೇಶ): ಶಿಕ್ಷಣ ಸಂಸ್ಥೆಯೊಂದು ತಿರುಮಲ ತಿರುಪತಿ ದೇವಸ್ಥಾನದ(ಟಿಟಿಡಿ) ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ₹ 1.11 ಕೋಟಿ ದೇಣಿಗೆ ನೀಡಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ.

ಉದ್ಯಮಿ ಬಿ. ರವಿಕುಮಾರ್‌ ಅವರು, ಟಿಟಿಡಿ ಅಧ್ಯಕ್ಷ, ಬಿ.ಆರ್‌.ನಾಯ್ಡು ಅವರಿಗೆ ಡಿಮ್ಯಾಂಡ್‌ ಡ್ರಾಫ್ಟ್‌ ಅನ್ನು ಹಸ್ತಾಂತರಿಸಿದ್ದಾರೆ.

ಹೃದಯ, ಮಿದುಳು, ಕ್ಯಾನ್ಸರ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್ ಮೂಲಕ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದೆ.

ADVERTISEMENT

ಅಲ್ಲದೇ ಮೂತ್ರಪಿಂಡ ವೈಫಲ್ಯ, ಹಿಮೋಫಿಲಿಯಾ, ಥಲಸ್ಸೇಮಿಯಾ ಮತ್ತು ಇತರ ಕಾಯಿಲೆಗಳ ಚಿಕಿತ್ಸೆಗಾಗಿ ಸಂಶೋಧನೆ ನಡೆಸುವವರಿಗೆ ಹಣಕಾಸು ನೆರವನ್ನೂ ಒದಗಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.