ADVERTISEMENT

ಪ್ಯಾರಾಲಿಂಪಿಕ್ ಕ್ರೀಡಾಪಟು ದೀಪಾ ಮಲಿಕ್ ಬಿಜೆಪಿಗೆ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 14:21 IST
Last Updated 25 ಮಾರ್ಚ್ 2019, 14:21 IST
   

ನವದೆಹಲಿ: ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಮೊದಲ ಬಾರಿ ಪದಕ ಗಳಿಸಿದ್ದ ಮಹಿಳಾ ಕ್ರೀಡಾಪಟು ದೀಪಾ ಮಲಿಕ್ ಸೋಮವಾರ ಬಿಜೆಪಿ ಸೇರಿದ್ದಾರೆ.

ಹರಿಯಾಣ ಬಿಜೆಪಿ ಘಟಕ ಮುಖ್ಯಸ್ಥ ಸುಭಾಶ್ ಬರಾಲಾ ಮತ್ತು ಪಕ್ಷದ ಹಿರಿಯ ನೇತಾರರ ಸಮ್ಮುಖದಲ್ಲಿ ದೀಪಾ ಬಿಜೆಪಿಗೆ ಸೇರಿದರು.

ಮಹಿಳೆಯರ ಅಭಿವೃದ್ಧಿಗಾಗಿ ಮೋದಿ ತುಂಬಾ ಕೆಲಸ ಮಾಡಿದ್ದಾರೆ.ಮಹಿಳೆ ಪರ ಅವರ ಕಾಳಜಿ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.ಅವರು ಪಕ್ಷದ ನಾಯಕಿಯರಿಗೆ ಸಚಿವ ಸಂಪುಟದಲ್ಲಿ ಉತ್ತಮ ಹುದ್ದೆಗಳನ್ನು ಕೊಟ್ಟಿದ್ದಾರೆ.ಅಂಗವಿಕಲರ ಶ್ರೇಯಾಭಿವೃದ್ಧಿಗಾಗಿ ಮೋದಿಕೆಲಸ ಮಾಡಿದ್ದಾರೆ ಎಂದು ದೀಪಾ ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ದೀಪಾ ಅವರನ್ನು ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆ. ಅವರ ಸಾನಿಧ್ಯವು ನಮ್ಮ ಸಂಘಟನೆಗೆ ಬಲ ತುಂಬಲಿದೆ.ಅವರು ಎಲ್ಲರಿಗೂ ಸ್ಫೂರ್ತಿ.ದೇಶಕ್ಕೆ ದೇಶವೇ ಹೆಮ್ಮೆ ಪಡುವಂತೆ ಮಾಡಿದವರು ಅವರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಜೈನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.