ADVERTISEMENT

ಚೀನಾದ 81 ಪ್ರಜೆಗಳಿಗೆ ಭಾರತ ತೊರೆಯುವಂತೆ ನೋಟಿಸ್, 117 ಮಂದಿ ಗಡಿ ಪಾರು: ಕೇಂದ್ರ

ಪಿಟಿಐ
Published 2 ಆಗಸ್ಟ್ 2022, 11:15 IST
Last Updated 2 ಆಗಸ್ಟ್ 2022, 11:15 IST
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್: ಪಿಟಿಐ ಚಿತ್ರ
ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್: ಪಿಟಿಐ ಚಿತ್ರ   

ನವದೆಹಲಿ: 2019 ಮತ್ತು 2021ರ ನಡುವೆ ವೀಸಾ ಷರತ್ತು ಉಲ್ಲಂಘನೆ ಹಾಗೂ ಅಕ್ರಮ ಚಟುವಟಿಕೆ ಆರೋಪದಡಿ ಚೀನಾದ 81 ಪ್ರಜೆಗಳಿಗೆ ಭಾರತ ತೊರೆಯುವಂತೆ ನೋಟಿಸ್ ನೀಡಲಾಗಿದ್ದು, 117 ಮಂದಿಯನ್ನು ಗಡಿ ಪಾರು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ.

ಇದರ ಜೊತೆಗೆ, ವೀಸಾ ಷರತ್ತು ಉಲ್ಲಂಘನೆ ಮತ್ತು ಇತರೆ ಅಕ್ರಮ ಚಟುವಟಿಕೆ ನಡೆಸಿದ 726 ಮಂದಿ ಚೀನೀ ಪ್ರಜೆಗಳನ್ನು ಪ್ರತಿಕೂಲ ಪಟ್ಟಿಗೆ ಸೇರಿಸಲಾಗಿದೆ ಎಂದು ಕೇಂದ್ರಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.

ಭಾರತಕ್ಕೆ ಆಗಮಿಸಿ ಅಕ್ರಮವಾಗಿ ನೆಲೆಸಿರುವ ಚೀನೀಯರು ಸೇರಿದಂತೆ ವಿದೇಶಿಗರ ದಾಖಲೆ ಸರ್ಕಾರದ ಬಳಿ ಇದೆ ಎಂದೂ ಅವರು ಹೇಳಿದ್ದಾರೆ.

ADVERTISEMENT

ಇವರಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಅಥವಾ ಆರೋಗ್ಯದ ಕಾರಣಗಳಿಂದ ಅಥವಾ ಇತರೆ ವೈಯಕ್ತಿಕ ಕಾರಣಗಳಿಂದಾಗಿ ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲಿ ಉಳಿದಿದ್ದಾರೆ.

ಉದ್ದೇಶಪೂರ್ವಕವಲ್ಲದೆ ಅನಿವಾರ್ಯವಾಗಿ ದೇಶದಲ್ಲಿ ನೆಲೆಸಿರುವವರಿಗೆ ದಂಡ ವಿಧಿಸಿ ವೀಸಾ ಅವಧಿ ವಿಸ್ತರಣೆಯಂತಹ ಕ್ರಮ ಕೈಗೊಳ್ಳಲಾಗಿದೆ. ಉದ್ದೇಶಪೂರ್ವಕವಾಗಿಯೂ ದೆಶದಲ್ಲಿ ನೆಲೆಸಿರುವವರ ವಿರುದ್ಧ 1946ರ ವಿದೇಶಿ ಕಾಯ್ದೆ ಅನ್ವಯ ಕ್ರಮ ಜರುಗಿಸಲಾಗಿದೆ. ಅಂತವರಿಗೆ ‘ಲೀವ್ ಇಂಡಿಯಾ’ ನೋಟಿಸ್ ಮತ್ತು ದಂಡ ವಿಧಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.