ADVERTISEMENT

ಪರಿಸರ ಜಾಗೃತಿಗಾಗಿ ಪ್ರತಿಯೊಬ್ಬರು ಒಂದು ನಿಮಿಷ ಮೀಸಲಿಡಿ : ಶಿಂದೆ

ಪಿಟಿಐ
Published 21 ಮೇ 2023, 5:51 IST
Last Updated 21 ಮೇ 2023, 5:51 IST
ಜುಹು ಬೀಚ್‌ನಲ್ಲಿ ನಡೆದ 'ಬೀಚ್‌ ಕ್ಲೀನ್‌ ಅಪ್‌' ಅಭಿಯಾನದಲ್ಲಿ ಪಾಲ್ಗೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ (Facebook/AmeetSatam)
ಜುಹು ಬೀಚ್‌ನಲ್ಲಿ ನಡೆದ 'ಬೀಚ್‌ ಕ್ಲೀನ್‌ ಅಪ್‌' ಅಭಿಯಾನದಲ್ಲಿ ಪಾಲ್ಗೊಂಡ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ (Facebook/AmeetSatam)   

ಮುಂಬೈ: ಪರಿಸರ ಮತ್ತು ಸ್ವಚ್ಛತೆಯ ಬಗೆಗಿನ ಜಾಗೃತಿಗಾಗಿ ಪ್ರತಿಯೊಬ್ಬ ನಾಗರಿಕರು ಪ್ರತಿದಿನ ಒಂದು ನಿಮಿಷ ಮೀಸಲಿಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಭಾನುವಾರ ಹೇಳಿದರು.

ಮುಂಬೈನ ಜುಹು ಬೀಚ್‌ನಲ್ಲಿ ನಡೆದ 'ಬೀಚ್‌ ಕ್ಲೀನ್‌ ಅಪ್‌' ಅಭಿಯಾನದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ ಶಿಂದೆ, ’ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಬೇಕಾಗಿದೆ' ಎಂದರು.

’ಜಿ20 ಮೂರನೇ ಪರಿಸರ ಮತ್ತು ಸುಸ್ಥಿರ ಹವಾಮಾನ ಕಾರ್ಯಚರಣೆ ಸಮೂಹದ (ಇಸಿಎಸ್‌ಡಬ್ಲ್ಯೂಜಿ) ಸಭೆಯ ಭಾಗವಾಗಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರ ಜಾಗೃತಿ ಅಭಿಯಾನದಲ್ಲಿ ನಾಗರಿಕರ ಭಾಗವಹಿಸುವಿಕೆಯು ಪರಿಸರ ಸಮತೋಲನವನ್ನು ಕಾಪಾಡಿಕೊಳ್ಳಲು ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ' ಎಂದು ಹೇಳಿದರು.

ADVERTISEMENT

'ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನದ ಸವಾಲುಗಳನ್ನು ಎದುರಿಸುವುದು ಇಂದಿನ ಅಗತ್ಯವಾಗಿದೆ. ಇಂದು ದೇಶದ 35 ಸ್ಥಳಗಳಲ್ಲಿ ಏಕಕಾಲದಲ್ಲಿ ’ಬೀಚ್‌ ಕ್ಲೀನ್‌ ಅಪ್‌’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಜಿ7 ಇಸಿಎಸ್‌ಡಬ್ಲ್ಯೂಜಿ ಮೂರನೇ ಸಭೆಯು ಮುಂಬೈನಲ್ಲಿ ಭಾನುವಾರ ನಡೆದಿದ್ದು, ಸಮುದ್ರ ಸಂಪನ್ಮೂಲ ರಕ್ಷಣೆ (ಬ್ಲೂ ಎಕನಾಮಿ) ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜಿ20 ರಾಷ್ಟ್ರಗಳ ಪ್ರತಿನಿಧಿಗಳು ಕೂಡ ಅಭಿಯಾನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.