ADVERTISEMENT

ಅತ್ಯಾಚಾರ ದೂರು: 75 ವರ್ಷದ ಉದ್ಯಮಿ ಬಂಧನ

ಪಿಟಿಐ
Published 16 ಜೂನ್ 2022, 15:48 IST
Last Updated 16 ಜೂನ್ 2022, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಸಂಬಂಧಿಯೂ ಆಗಿದ್ದ 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ತನಗಿರುವ ಭೂಗತದೊರೆ ದಾವೂದ್ ಇಬ್ರಾಹಿಂ ಸಂಪರ್ಕ ಬಳಸಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ 75 ವರ್ಷದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತ ಮಹಿಳೆ ಈ ಸಂಬಂಧ ಅಂಬೋಲಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. 2007ರಿಂದ ಉದ್ಯಮಿ ಹಲವು ಬಾರಿ ಮುಂಬೈನ ವಿವಿಧ ಸ್ಥಳಗಳಿಗೆ ಕರೆದೊಯ್ದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಕುರಿತಂತೆ ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡಿಸುತ್ತೇನೆ ಎಂದು ಬೆದರಿಸಿದ್ದ ಎಂದಿದ್ದಾರೆ.

‘ದಾವೂದ್‌ ಇಬ್ರಾಹಿಂ ನನ್ನ ಗೆಳೆಯ. ಇನ್ನೊಬ್ಬ ಕ್ರಿಮಿನಲ್ ಆರೋಪಿ ಹಾಜಿ ಮಸ್ತಾನ್‌ ನನ್ನ ಸಂಬಂಧಿ ಎಂದು ಹೇಳಿದ್ದ. ಅಲ್ಲದೆ, ನನ್ನಿಂದ ಶೇ 1ರಷ್ಟು ಬಡ್ಡಿ ನೀಡುವುದಾಗಿ ₹ 2 ಕೋಟಿ ಪಡೆದುಕೊಂಡಿದ್ದ’ ಎಂದು ಮಹಿಳೆ ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಅಂಧೇರಿ ನಿವಾಸಿಯಾಗಿರುವ ಮಹಿಳೆ ನೀಡಿದ ದೂರು ಆಧರಿಸಿ ಅಂಬೋಲಿ ಠಾಣೆ ಪೊಲೀಸರು ಐಪಿಸಿಯ 376 (2) (ಎನ್) (ಪುನರಾವರ್ತಿತ ಅತ್ಯಾಚಾರ), 504 (ಶಾಂತಿ ಭಂಗ) ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.