ADVERTISEMENT

ಟೀ ಜೊತೆ ಉಪಾಹಾರ ಕೊಡದಿದ್ದಕ್ಕೆ ಸೊಸೆಗೆ ಗುಂಡಿಕ್ಕಿದ್ದ 76 ವರ್ಷದ ಮಾವ

ಪಿಟಿಐ
Published 15 ಏಪ್ರಿಲ್ 2022, 5:26 IST
Last Updated 15 ಏಪ್ರಿಲ್ 2022, 5:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಥಾಣೆ: ಬೆಳಿಗ್ಗೆ ಚಹಾದೊಂದಿಗೆ ಉಪಾಹಾರ ನೀಡಲಿಲ್ಲವೆಂದು ಸಿಟ್ಟಿಗೆದ್ದ 76 ವರ್ಷದ ವೃದ್ಧರೊಬ್ಬರು ತಮ್ಮ ಸೊಸೆಯ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಥಾಣೆಯಲ್ಲಿ ನಡೆದಿದೆ.

ಥಾಣೆಯ ರಾಬೊಡಿ ನಿವಾಸಿಯಾಗಿರುವ 42 ವರ್ಷದ ಮಹಿಳೆಯ ಕಿಬ್ಬೊಟ್ಟೆಗೆ ಗುಂಡು ಹೊಕ್ಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಬಂಧಿಕರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.

ಕೊಲೆ ಯತ್ನ ಮತ್ತು ಅಕ್ರಮ ಪಿಸ್ತೂಲ್‌ ಇಟ್ಟುಕೊಂಡಿದ್ದಕ್ಕೆ ಸಂಬಂಧಿಸಿ ಕಾಶೀನಾಥ್‌ ಪಾಂಡುರಂಗ ಪಾಟೀಲ್‌ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಸಂತೋಷ್‌ ಘಾಟೆಕರ್‌ ತಿಳಿಸಿದ್ದಾರೆ. ಕಾಶೀನಾಥ್‌ ಅವರನ್ನು ಇನ್ನೂ ಬಂಧಿಸಿಲ್ಲ.

ADVERTISEMENT

ಗುರುವಾರ ಬೆಳಗ್ಗೆ 11.30ಕ್ಕೆ ಘಟನೆ ಸಂಭವಿಸಿದೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಗುಂಡಿನ ದಾಳಿಯ ಹಿಂದೆ ಬೇರೆ ಏನಾದರೂ ಕಾರಣವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.