ಚುನಾವಣಾ ಆಯೋಗ
ನವದೆಹಲಿ: ಚುನಾವಣಾ ಕಣದಲ್ಲಿ ಸಮ ಪ್ರಮಾಣದಲ್ಲಿ ಸ್ಪರ್ಧೆ ಇರುವುದನ್ನು ಖಾತರಿಪಡಿಸಕೊಳ್ಳಲು ಮುಂಬರುವ ಬಿಹಾರ ವಿಧಾಸಭಾ ಚುನಾವಣೆ ಮತ್ತು ಏಳು ವಿಧಾನಸಭಾ ಉಪ ಚುನಾವಣೆಗಳಿಗಾಗಿ 470 ಅಧಿಕಾರಿಗಳನ್ನು ವೀಕ್ಷಕರಾಗಿ ಚುನಾವಣಾ ಆಯೋಗ ನಿಯೋಜಿಸಲಿದೆ.
470 ಅಧಿಕಾರಿಗಳಲ್ಲಿ 320 ಐಎಎಸ್ ಅಧಿಕಾರಿಗಳು ಮತ್ತು 60 ಐಪಿಎಸ್ ಅಧಿಕಾರಿಗಳು ಮತ್ತು 90 ಇತರ ಸೇವೆಗಳ ಅಧಿಕಾರಿಗಳು ಇರಲಿದ್ದಾರೆ ಎಂದು ಆಯೋಗವು ಭಾನುವಾರ ಪ್ರಕಟಿಸಿದೆ. ಈ ವೀಕ್ಷಕರ ಸಭೆಯನ್ನು ಅಕ್ಟೋಬರ್ 3ರಂದು ಆಯೋಗ ಇಲ್ಲಿ ನಿಗದಿಪಡಿಸಿದ್ದು, ಅದಕ್ಕೂ ಒಂದು ದಿನ ಮೊದಲು ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಲು ಬಿಹಾರಕ್ಕೆ ಭೇಟಿ ನೀಡಲಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22ರಂದು ಕೊನೆಗೊಳ್ಳುತ್ತದೆ ಮತ್ತು ಅದೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.