
ಪಿಟಿಐ
ಆನೆ (ಪ್ರಾತಿನಿಧಿಕ ಚಿತ್ರ)
ಛತ್ತೀಸಗಢ: ಇಲ್ಲಿಯ ಬಲೋದಬಜಾರ್-ಭಟಪಾರ ಜಿಲ್ಲೆಯ ಬರ್ನವಾಪಾರಾ ವನ್ಯಜೀವಿ ಅಭಯಾರಣ್ಯದಲ್ಲಿ ನಾಲ್ಕು ಆನೆಗಳು ಬಾವಿಗೆ ಬಿದ್ದಿದ್ದು, ಅರಣ್ಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದೆ. ಬಾವಿಗೆ ತಡೆಗೋಡೆ ಇಲ್ಲದ ಕಾರಣ ಆನೆಗಳು ಬಿದ್ದಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅರುಣ್ ಕುಮಾರ್ ಪಾಂಡೆ ಪಿಟಿಐಗೆ ತಿಳಿಸಿದ್ದಾರೆ.
ಬಾವಿಯಲ್ಲಿ ಅನೆಗಳು ಬಿದ್ದು ಒದ್ದಾಡುತ್ತಿರುವುದನ್ನು ಕಂಡು ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಮಣ್ಣು ಅಗೆಯುವ ಯಂತ್ರದ ಮೂಲಕ ಬಾವಿಯ ಸುತ್ತ ಮಣ್ಣು ತೆರವುಗೊಳಿಸಿ ಆನೆಗಳನ್ನು ಮೇಲಕ್ಕೆ ಎತ್ತುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.