ADVERTISEMENT

ಎಲ್ಗರ್‌ ಪ್ರಕರಣ: ಆರೋಪಿಗಳಿಂದ ಉಪವಾಸ ಸತ್ಯಾಗ್ರಹ

ಪಿಟಿಐ
Published 5 ಜುಲೈ 2022, 13:57 IST
Last Updated 5 ಜುಲೈ 2022, 13:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಎಲ್ಗರ್‌ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ ಸ್ಟ್ಯಾನ್ ಸ್ವಾಮಿ ಅವರ ನಿಧನವನ್ನು ಸಾಂಸ್ಥಿಕ ಹತ್ಯೆಯೆಂದು ಆರೋಪಿಸಿ, ಪ್ರಕರಣದ 11 ಮಂದಿ ಆರೋಪಿಗಳು ಇಲ್ಲಿನ ತಾನೋಜಿ ಜೈಲಿನಲ್ಲಿ ಮಂಗಳವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಸ್ಟ್ಯಾನ್ ಸ್ವಾಮಿ ಅವರು ಕಳೆದ ವರ್ಷ ಜುಲೈ 5ರಂದು ನಿಧನರಾಗಿದ್ದರು.

ಅಧಿಕೃತರ ನಿರಾಸಕ್ತಿ, ವೈದ್ಯಕೀಯ ಸೌಲಭ್ಯಗಳ ಕೊರತೆಯು ಸ್ವಾಮಿ ಅವರ ಸಾವಿಗೆ ಕಾರಣವಾಗಿತ್ತು. ಜೈಲಿನ ಈ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಜೈಲು ಅಧೀಕ್ಷಕರಿಗೆ ಮತ್ತು ಪ್ರಕರಣದ ವಕೀಲರಿಗೆ ಬರೆದ ಪತ್ರದಲ್ಲಿ ಪ್ರಕರಣದ ಆರೋಪಿ ಹಾಗೂ ಸಾಮಾಜಿಕ ಕಾರ್ಯಕರ್ತ ಸುಧೀರ್‌ ಧವಳೆ ಆರೋಪಿಸಿದ್ದಾರೆ.

ADVERTISEMENT

ಸುಧೀರ್‌ ಧವಳೆ ಜೊತೆಗೆ ಇತರ ಆರೋಪಿಗಳಾದ ಸುರೇಂದ್ರ ಗಡಲಿಂಗ್‌, ಅರುಣ್‌ ಫೆರೇರಾ, ಮಹೇಶ್‌ ರಾವತ್‌, ರೋನಾ ವಿಲ್ಸನ್‌, ವೆರ್ನನ್‌ ಗೊನ್ಸಾಲ್ವೆಸ್‌ , ಸಾಗರ್‌ ಗೋರ್ಖೆ, ರಮೇಶ್‌ ಗಾಯ್ಚೋರ್‌, ಹನಿ ಬಾಬು, ಆನಂದ್‌ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಾಖಾ ಅವರೂ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.