ADVERTISEMENT

ಇಂಡಿಗೋ ವಿಮಾನ ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 15:26 IST
Last Updated 2 ಅಕ್ಟೋಬರ್ 2022, 15:26 IST
ವಿಮಾನ
ವಿಮಾನ   

ಮುಂಬೈ: ಇಂಡಿಗೋ ವಿಮಾನ ಸಂಸ್ಥೆ ವಿಮಾನ ಸ್ಫೋಟಿಸುವುದಾಗಿ ಅಪರಿಚಿತ ವ್ಯಕ್ತಿ ಮುಂಬೈ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (ಎಂಐಎಎಲ್‌)ಗೆ ಬೆದರಿಕೆ ಹಾಕಿ ಇಮೇಲ್ ಕಳುಹಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿ ಭಾನುವಾರ ತಿಳಿಸಿದ್ದಾರೆ.

ಶನಿವಾರ ರಾತ್ರಿ ಇ ಮೇಲ್ ಬಂದ ಬಳಿಕ, ವಿಮಾನವನ್ನು ಕುಲಂಕಷವಾಗಿ ತಪಾಸಣೆ ನಡೆಸಿದ ನಂತರ ಅದು ಹುಸಿ ಬೆದರಿಕೆ ಎಂದು ಗೊತ್ತಾಯಿತು. ಯಾವುದೇ ಅನುಮಾನಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಸಹರಾ ಪೊಲೀಸ್‌ ಠಾಣೆ ಅಧಿಕಾರಿ ಹೇಳಿದ್ದಾರೆ.

‘ಬಾಂಬ್ ಬೆದರಿಕೆಯಿಂದಾಗಿ ಅ.1 ರಂದು ಮುಂಬೈನಿಂದ ಅಹಮದಾಬಾದ್‌ಗೆ ಹೊರಟಿದ್ದ ವಿಮಾನ ವಿಳಂಬವಾಯಿತು.ಎಲ್ಲಾ ತಪಾಸಣೆ ಪೂರ್ಣಗೊಂಡ ನಂತರ ವಿಮಾನ ಪ್ರಯಾಣ ಬೆಳೆಸಿತು’ ಎಂದು ಇಂಡಿಗೋ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.