ADVERTISEMENT

ಮಹಾವಿಕಾಸ್‌ ಆಘಾಡಿಯಿಂದ ಮಾದರಿ ಸರ್ಕಾರ: ಸಂಜಯ್‌ ರಾವುತ್‌

ಪಿಟಿಐ
Published 2 ಏಪ್ರಿಲ್ 2021, 10:08 IST
Last Updated 2 ಏಪ್ರಿಲ್ 2021, 10:08 IST
   

ಮುಂಬೈ: ‘ಮಹಾರಾಷ್ಟ್ರದಲ್ಲಿ ಮೂರು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳು ಜತೆಗೂಡಿ ಮಹಾವಿಕಾಸ್‌ ಆಘಾಡಿ (ಎಂವಿಎ) ಸರ್ಕಾರ ರಚನೆಯಾಗಿದೆ. ಯುಪಿಎ ಅಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಈ ರೀತಿಯ ಪ್ರಯೋಗ ನಡೆಯಬೇಕು’ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್‌ ಶುಕ್ರವಾರ ಹೇಳಿದರು.

ಸಂಜಯ್‌ ರಾವುತ್‌ ಅವರು ಎಂವಿಎಯನ್ನು ‘ಮಾದರಿ ಸರ್ಕಾರ’ ಎಂದು ಕರೆದಿದ್ದಾರೆ.

‘ಕಳೆದ ಒಂದೂವರೆ ವರ್ಷದಿಂದ ಮೂರು ವಿಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಪಕ್ಷಗಳು ಒಟ್ಟಾಗಿ ಸರ್ಕಾರವನ್ನು ಯಶಸ್ವಿಯಾಗಿ ನಡೆಸುತ್ತಿವೆ. ಈ ಮೂಲಕ ಮಹಾರಾಷ್ಟ್ರ ಸರ್ಕಾರವು ಬಿಜೆಪಿ ವಿರೋಧ ಪಕ್ಷಗಳಿಗೆ ಹೊಸ ಮಾರ್ಗ ತೋರಿಸಿಕೊಟ್ಟಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ರಾಷ್ಟ್ರದಲ್ಲಿ ಯುಪಿಎ ಅಡಿಯಲ್ಲಿ ಈ ರೀತಿಯ ಪ್ರಯೋಗಗಳು ನಡೆಯಬೇಕು. ಈ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ 27 ವಿರೋಧ ಪಕ್ಷದ ನಾಯಕರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಎಲ್ಲಾ ವಿರೋಧ ಪಕ್ಷಗಳು ಜೊತೆಯಾಗಿ ಹೊಸ ರಾಜಕೀಯ ನೀತಿಯ ಬಗ್ಗೆ ಚರ್ಚೆ ನಡೆಸಬೇಕು. 1975ರ ಬಳಿಕ ಜಯ ಪ್ರಕಾಶ್‌ ನಾರಾಯಣ ಅವರು ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಿದ್ದರು. ಆದರೆ ಈಗ ಅಂತಹ ಯಾವುದೇ ನಾಯಕರಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.