ADVERTISEMENT

ಹೊಸ ಕ್ರಿಮಿನಲ್ ಕಾನೂನು ವ್ಯರ್ಥ: ಪಿ. ಚಿದಂಬರಂ

ಪಿಟಿಐ
Published 2 ಜುಲೈ 2025, 13:43 IST
Last Updated 2 ಜುಲೈ 2025, 13:43 IST
<div class="paragraphs"><p>ಪಿ. ಚಿದಂಬರಂ</p></div>

ಪಿ. ಚಿದಂಬರಂ

   

ನವದೆಹಲಿ: ಮೂರು ಹೊಸ ಕ್ರಿಮಿನಲ್‌ ಕಾನೂನುಗಳ ಜಾರಿ ವ್ಯರ್ಥವಾಗಿದ್ದು, ನ್ಯಾಯಾಧೀಶರು, ವಕೀಲರು ಮತ್ತು ಪೊಲೀಸರಲ್ಲಿ ಗೊಂದಲ ಸೃಷ್ಟಿರುವುದಷ್ಟೇ ಅದರ ಸಾಧನೆ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಟೀಕಿಸಿದ್ದಾರೆ.

‘ಮೂರು ಹೊಸ ಕಾನೂನುಗಳು ಸ್ವಾತಂತ್ಯ್ರೋತ್ತರ ಭಾರತದ ಅತೀ ದೊಡ್ಡ ಸುಧಾರಣೆಯಾಗಿದೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಬುಧವಾರ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಚಿದಂಬರಂ, ‘ಮೂರು ಹೊಸ ಕ್ರಿಮಿನಲ್‌ ಕಾನೂನುಗಳು ದೇಶದಲ್ಲಿನ ಅತಿ ದೊಡ್ಡ ಸುಧಾರಣೆ ಎಂದು ಬಿಂಬಿಸಲು ಕೇಂದ್ರ ಸರ್ಕಾರ ಪದೇ ಪದೇ ಪ್ರಯತ್ನಿಸುತ್ತಿದೆ. ಆದರೆ, ಈ ಮಾತು ಸತ್ಯಕ್ಕೆ ದೂರವಾದುದು’ ಎಂದಿದ್ದಾರೆ.

ADVERTISEMENT

‘ಭಾರತೀಯ ದಂಡ ಸಂಹಿತೆ (ಐಪಿಸಿ), ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗಳನ್ನು ಹೊಸ ಮೂರು ಕಾನೂನುಗಳ ಜೊತೆ ತಾಳೆಮಾಡಿ ಭಿನ್ನ ನಿಲುವಿನ ಟಿಪ್ಪಣಿ ಸಿದ್ಧಪಡಿಸಿದ್ದೇನೆ. ಐಪಿಸಿಯ ಶೇಕಡ 90ರಿಂದ ಶೇ 95ರಷ್ಟು, ಸಿಆರ್‌ಪಿಸಿಯ ಶೇ 95ರಷ್ಟು ಮತ್ತು ಸಾಕ್ಷ್ಯ ಕಾಯ್ದೆಯ ಶೇ 99ರಷ್ಟು ಸೆಕ್ಷನ್‌ಗಳನ್ನೇ ಕತ್ತರಿಸಿ ಹೊಸ ಕಾಯ್ದೆಗಳಲ್ಲಿ ಸೇರಿಸಲಾಗಿದೆ. ಕೆಲವಷ್ಟೇ ಹೊಸ ಅಂಶಗಳಿವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.