ADVERTISEMENT

ಮಹಾರಾಷ್ಟ್ರ: ಶಿವಸೇನಾ ಸಂಸದೆಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ಇ.ಡಿ ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಆಗಸ್ಟ್ 2021, 10:42 IST
Last Updated 30 ಆಗಸ್ಟ್ 2021, 10:42 IST
ಶಿವಸೇನಾ ಸಂಸದೆ ಭಾವನಾ ಗವಳಿ
ಶಿವಸೇನಾ ಸಂಸದೆ ಭಾವನಾ ಗವಳಿ   

ಮುಂಬೈ: ಶಿವಸೇನಾ ಸಂಸದೆ ಭಾವನಾ ಗವಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ 9 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿದ್ದಾರೆ.

ಮಹಿಳಾ ಉತ್ಕರ್ಷ ಪ್ರತಿಷ್ಠಾನ, ಬಾಲಾಜಿ ಸಹಕಾರಿ ಪಾರ್ಟಿಕಲ್ ಬೋರ್ಡ್, ಬಿಎಎಂಎಸ್ ಕಾಲೇಜ್‌, ಭಾವನಾ ಆಗ್ರೋ ಪ್ರಾಡಕ್ಟ್ ಸರ್ವಿಸಸ್ ಲಿಮಿಟೆಡ್ ಸೇರಿದಂತೆ ವಾಶೀಮ್‌ ಜಿಲ್ಲೆಯ 9 ಸ್ಥಳಗಳಲ್ಲಿ ದಾಳಿ ನಡೆದಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಭಾವನಾ ಗವಳಿ ಅವರು ₹72 ಕೋಟಿಯ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ.

ADVERTISEMENT

ಶಿವಸೇನಾ ಸಂಸದೆಯಾಗಿರುವ ಭಾವನಾ ಪುಂಡಲೀಕರಾವ್ ಗವಳಿ ಅವರು ಮಹಾರಾಷ್ಟ್ರದ ಯವತಮಾಳ–ವಾಶೀಮ್‌ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಆಪ್ತ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ ಅವರಿಗೂ ಇ.ಡಿ ನೋಟಿಸ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.