ADVERTISEMENT

4 ತಿಂಗಳಲ್ಲಿ ‘ಆರ್ಡರ್ಲಿ’ ವ್ಯವಸ್ಥೆ ಕೈಬಿಡಿ: ಮದ್ರಾಸ್‌ ಹೈಕೋರ್ಟ್‌ ಆದೇಶ

ಪಿಟಿಐ
Published 23 ಆಗಸ್ಟ್ 2022, 11:40 IST
Last Updated 23 ಆಗಸ್ಟ್ 2022, 11:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ (ಪಿಟಿಐ): ಪೊಲೀಸ್‌ ಇಲಾಖೆಯಲ್ಲಿ ಬಳಕೆಯಲ್ಲಿರುವ ‘ಆರ್ಡರ್ಲಿ’ ವ್ಯವಸ್ಥೆಯನ್ನು ನಾಲ್ಕು ತಿಂಗಳಲ್ಲಿ ಸಂಪೂರ್ಣವಾಗಿ ತೆಗೆದುಹಾಕಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಮಂಗಳವಾರ ತಮಿಳುನಾಡಿನ ಡಿಜಿಪಿ ಅವರಿಗೆ ಆದೇಶಿಸಿತು.

ವಸತಿಗೃಹ ತೆರವುಗೊಳಿಸಬೇಕು ಎಂಬ ಹಿರಿಯ ಅಧಿಕಾರಿಗಳ ಆದೇಶ ಪ್ರಶ್ನಿಸಿ ಯು.ಮಾಣಿಕ್ಯವೇಲ್‌ ಎಂಬುವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ, ಕಮಿಷನರ್ ಮತ್ತು ಡಿಜಿಪಿ ಅವರು ಸಲ್ಲಿಸಿದ್ದ ಪ್ರಮಾಣಪತ್ರವನ್ನು ಆಧರಿಸಿ ಕೋರ್ಟ್‌ಈ ಆದೇಶವನ್ನು ನೀಡಿದೆ.

ಗೃಹ ಇಲಾಖೆ 1979ರಲ್ಲಿ ನೀಡಿರುವ ಆದೇಶಕ್ಕೆ ಅನುಗುಣವಾಗಿ ಈ ವ್ಯವಸ್ಥೆಯನ್ನು ಕೈಬಿಡಬೇಕು ಎಂದು ಹೇಳಿತು.ಹಿರಿಯ ಮತ್ತು ನಿವೃತ್ತ ಅಧಿಕಾರಿಗಳ ನಿವಾಸದಲ್ಲಿ ಸೇವೆ ಸಲ್ಲಿಸಲು ಕಾನ್‌ಸ್ಟೆಬಲ್ ಹಂತದ ಸಿಬ್ಬಂದಿಯನ್ನು ನಿಯೋಜಿಸುವುದು ಆರ್ಡರ್ಲಿ ವ್ಯವಸ್ಥೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.