ADVERTISEMENT

ಕಾರಿನ ಮೇಲೆ ಟೋಲ್‌ ಸಿಬ್ಬಂದಿ;100 ಕಿ.ಮೀ ವೇಗ, ಐದಾರು ಕಿ.ಮೀ ನುಗ್ಗಿದ ಕಾರು

ಟೋಲ್‌ ಗಲಾಟೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:04 IST
Last Updated 13 ಏಪ್ರಿಲ್ 2019, 14:04 IST
   

ಗುರುಗ್ರಾಮ: ಮುಂದಿನ ಸಂಚಾರಕ್ಕೆ ಟೋಲ್‌ ಪಾವತಿಸುವಂತೆ ಕೇಳಿದ ಸಿಬ್ಬಂದಿನ್ನು ಕಾರಿನಬಾನೆಟ್‌ ಮೇಲೆ ಸುಮಾರು 5–6 ಕಿ.ಮೀ ವರೆಗೂ ಹೊತ್ತೊಯ್ದಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಕಾರಿನ ಬಾನೆಟ್‌ ಹಿಡಿದು ಮುಂದೆ ಸಾಗದಂತೆ ನಿಲ್ಲಿಸಲು ಪ್ರಯತ್ನಿಸಿದ ಸಿಬ್ಬಂದಿಯನ್ನು ಲೆಕ್ಕಿಸದೆ, ಗಂಟೆಗೆ 100 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ನುಗ್ಗಿದ್ದಾನೆ.

ಟೋಲ್‌ ಸಿಬ್ಬಂದಿ ಪ್ರಕಾರ, ಕಾರಿನ ಡ್ರೈವರ್‌ ‘ನೀನು ನನ್ನ ಕಾರು ತಡೆಯುವೆಯೇ? ಪೊಲೀಸರೂ ಸಹ ನನ್ನ ಕಾರು ತಡೆಯಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾಗಿ ಹೇಳಿದ್ದಾರೆ.

ADVERTISEMENT

ಟೋಲ್‌ ತಡೆಯನ್ನು ಸೀಳಿಕೊಂಡು ನುಗ್ಗುವ ಟಯೋಟಾ ಇನೋವಾ ಕಾರನ್ನು ನಿಲ್ಲಿಸಲು ಟೋಲ್‌ ಸಿಬ್ಬಂದಿ ಸಾಕಷ್ಟು ಪ್ರಯತ್ನಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಇದೇ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಕಾರಿನ ಬಾನೆಟ್‌ ಹಿಡಿದಿದ್ದಾರೆ. ಯಾವುದನ್ನೂ ಲೆಕ್ಕಿಸದೆಯೇ ಕಾರಿನ ಚಾಲಕ ಅತ್ಯಂತ ವೇಗವಾಗಿ ಕಾರು ಚಲಾಯಿಸಿಕೊಂಡು ಮುನ್ನುಗ್ಗಿದ್ದಾನೆ.

‘ಸುಮಾರು 5–6 ಕಿ.ಮೀ ವರೆಗೂ ಗಂಟೆಗೆ 100 ಕಿ.ಮೀ ವೇಗದಲ್ಲಿ ಕಾರು ಚಲಾಯಿಸಿಕೊಂಡು ನುಗ್ಗಿದ. ನಾನು ಕಾರಿನ ಬಾನೆಟ್‌ ಹಿಡಿದು ಕಾರಿಗೆ ಅಪ್ಪಿಕೊಂಡಿದ್ದೆ..’ ಎಂದು ಟೋಲ್‌ ಸಿಬ್ಬಂದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.